ಮುನೇನಕೊಪ್ಪ ಅವರು ಬಿಜೆಪಿಯಲ್ಲೇ ಇರ್ತಾರಾ…!? ಸೋಮವಾರ “ಪತ್ರಿಕಾಗೋಷ್ಠಿ” ಕರೆದ ಮಾಜಿ ಸಚಿವರು….

ಹುಬ್ಬಳ್ಳಿ: ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಭಾರತೀಯ ಜನತಾ ಪಕ್ಷವನ್ನ ತೊರೆದು ಕಾಂಗ್ರೆಸ್ ಪಕ್ಷವನ್ನ ಸೇರ್ಪಡೆ ಆಗುತ್ತಾರೆ ಊಹಾಪೋಹಗಳು ಹೆಚ್ಚಾಗಿರುವ ಬೆನ್ನಲ್ಲೇ ಸ್ವತಃ ಶಂಕರ ಪಾಟೀಲ ಮುನೇನಕೊಪ್ಪ ಅವರು ಸೋಮವಾರ ಪತ್ರಿಕಾಗೋಷ್ಠಿ ಕರೆದಿದ್ದು, ತೀವ್ರ ರಾಜಕೀಯ ಸಂಕಲನಕ್ಕೆ ಕಾರಣವಾಗಿದೆ.
ನವಲಗುಂದ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿದ್ದ ಶಂಕರ ಪಾಟೀಲ ಮುನೇನಕೊಪ್ಪ ಅವರು ಕಳೆದ ಬಾರಿಯ ಬಿಜೆಪಿ ಸರಕಾರವಿದ್ದಾಗ ಹಲವು ಹುದ್ದೆಗಳನ್ನ ಅಲಂಕರಿಸಿದ್ದರು. ಆದರೆ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದರೂ ಸೋಲನ್ನ ಅನುಭವಿಸಿದ್ದರು.
ಚುನಾವಣೆ ಮುಗಿದು ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೊದಲ ಹದಿನೈದು ದಿನಗಳಿಂದಲೇ ಶಂಕರ ಪಾಟೀಲ ಅವರು ಕಾಂಗ್ರೆಸ್‌ಗೆ ಹೋಗ್ತಾರೆ ಎಂದು ಹಲವರು, ಹಲವು ರೀತಿಯಲ್ಲಿ ಮಾತಾಡಿಕೊಂಡು ಹೋಗುತ್ತಿದ್ದಾರೆ.
ಇಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಕೂಡಾ ಪಕ್ಷಕ್ಕೆ ಬರುವ ಮಾಹಿತಿಯಿದೆ ಎಂದಿದ್ದಾರೆ. ಈ ನಡುವೆ ನಾಳೆಗೆ ಪತ್ರಿಕಾಗೋಷ್ಠಿ ಕರೆದಿದ್ದು, ರಾಜಕೀಯ ರಂಗದಲ್ಲಿ ತಲ್ಕಣ ಮೂಡಿಸಿದೆ.