ಮುನೇನಕೊಪ್ಪ ಅವರ ಕಾಂಗ್ರೆಸ್ ಸೇರ್ಪಡೆ 100% ಸುಳ್ಳು….
1 min readಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದ ಕಟ್ಟಾಳುವಾಗಿರುವ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆಂದು ಕೆಲವರು ಊಹಾಪೋಹಗಳನ್ನ ಸೃಷ್ಟಿ ಮಾಡುತ್ತಿದ್ದು, ಅದು ಶುದ್ಧ ಸುಳ್ಳು ಎಂಬ ಮಾಹಿತಿ ಕರ್ನಾಟಕವಾಯ್ಸ್.ಕಾಂಗೆ ಲಭಿಸಿದೆ.
ಬಿಜೆಪಿಯ ಹಿರಿಯ ಮುಖಂಡರು ಆಗಿರುವ ಶಂಕರ ಪಾಟೀಲಮುನೇನಕೊಪ್ಪ ಅವರನ್ನ ಹಲವರು ಸಂಪರ್ಕ ಮಾಡಿದ್ದರೂ, ಅಂತಹ ಯೋಚನೆಯನ್ನ ಅವರು ಮಾಡಲು ಸಾಧ್ಯವೇಯಿಲ್ಲ ಎನ್ನುತ್ತಾರೆ ಅವರನ್ನ ಬಲ್ಲವರು.
ಈ ಬಗ್ಗೆ ಸ್ವತಃ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಸ್ಪಷ್ಟತೆ ನೀಡಿದ್ದು, ಅಂತಹದ್ದನ್ನ ಮಾತಾಡುವುದೇ ಸರಿಯಲ್ಲ ಅಂದಿದ್ದಲ್ಲದೇ, ಮುನೇನಕೊಪ್ಪ ಅವರು ಬಿಜೆಪಿಯ ಕರ್ಮಟ ನಾಯಕರೆಂದು ಹೇಳಿದ್ದಾರೆ.
ಕೆಲವರು ದುರದ್ದೇಶದಿಂದ ಇಂತಹ ವದಂತಿಗಳನ್ನು ಹಬ್ಬಿಸಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಮಾಜಿ ಸಚಿವ ಮುನೇನಕೊಪ್ಪ ಅವರು ಪಕ್ಷ ತೊರೆಯುವ ಯಾವುದೇ ಲಕ್ಷಣಗಳು ಇಲ್ಲವೆಂಬುದು ಸತ್ಯ.