ಪ್ರಾಣಿ ಎಂದುಕೊಂಡು ತಮ್ಮವರಿಗೆ ಗುಂಡು ಹಾರಿಸಿದ ಬೇಟೆಗಾರರು
ಉತ್ತರಕನ್ನಡ: ಕಾಡು ಪ್ರಾಣಿ ಬೇಟೆಗೆ ಹೋದವರೇ ಎಡವಟ್ಟು ಮಾಡಿಕೊಂಡಿದ್ದು, ಪ್ರಾಣಿ ಎಂದು ಭಾವಿಸಿ ತಮ್ಮ ತಂಡದಲ್ಲೇ ಇದ್ದ ವ್ಯಕ್ತಿ ಮೇಲೆ ಗುಂಡು ಹಾರಿಸಿ ಪ್ರಕರಣ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಮಳಗಿ ಅರಣ್ಯ ಪ್ರದೇಶದಲ್ಲಿ ಸಂಭವಿಸಿದೆ.
ಐವರು ಕಾಡುಪ್ರಾಣಿ ಬೇಟೆಗೆ ಹೋಗಿದ್ರು. ಐವರಲ್ಲಿ ಓರ್ವನಿಗೆ ಗಂಭೀರ ಗಾಯವಾಗಿದ್ದು, ಗಾಯಗೊಂಡ ವ್ಯಕ್ತಿಯನ್ನ ಮುಸ್ತಾಕ್ ಎಂದು ಗುರುತಿಸಲಾಗಿದೆ. ಜೊತೆಗಿದ್ದ ಸುಲೇಮಾನ್, ಇಸ್ಮಾಯಿಲ್, ಮುಕಮುಲ್ ಹಾಗೂ ಅಹ್ಮದರನ್ನ ಬಂಧನ ಮಾಡಲಾಗಿದೆ. ಗಾಯಗೊಂಡ ಆರೋಪಿ ಮುಸ್ತಪಾನನ್ನ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಮುಂಡಗೋಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.