ಮುಳ್ಳುಹಂದಿ ಕೊಂದು ಟಿಕ್ ಟಾಕ್ ಮಾಡಿದ್ದವರ ಬಂಧನ: ಲಾಕ್ ಡೌನ್ ವೇಳೆ ತಲೆಮರೆಸಿಕೊಂಡಿದ್ದ ಕಿರಾತಕರು

ಕಲಬುರಗಿ: ಮುಳ್ಳುಹಂದಿ ಭೇಟೆಯಾಡಿ ಟಿಕ್ ಟಾಕ್ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ಕಲಬುರಗಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಅಂಬರೀಶ್ ನಾಯಕೋಡಿ ಮತ್ತು ನಾಗೇಶ್ ಬಂಧಿತ ಆರೋಪಿಗಳಾಗಿದ್ದು, ಕಲಬುರಗಿ ತಾಲ್ಲೂಕಿನ ಬೋಳೆವಾಡ ಗ್ರಾಮದ ನಿವಾಸಿಗಳಾಗಿದ್ದಾರೆ. ಇತ್ತೀಚೆಗೆ ಬೋಳೆವಾಡ ಗ್ರಾಮದಲ್ಲಿ ಮುಳ್ಳುಹಂದಿ ಭೇಟೆಯಾಡಿದ ಖದೀಮರು, ಬಳಿಕ ಚಿತ್ರಹಿಂಸೆ ನೀಡಿ ಕೊಂದು ಟಿಕ್ ಟಾಕ್ ಮಾಡಿದ್ದರು. ಅದು ಹೊರಬಿದ್ದ ನಂತರ ತಲೆಮರೆಸಿಕೊಂಡಿದ್ದ ಬಂಧನಕ್ಕೆ ಜಾಲ ಬೀಸಿದ್ದ ಅರಣ್ಯ ಅಧಿಕಾರಿಗಳು, ಆರೋಪಿಗಳನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರ ಮೇಲೆ ಅರಣ್ಯ ಇಲಾಖೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.