Posts Slider

Karnataka Voice

Latest Kannada News

“ಪಂಚಮಸಾಲಿ ಮಾಸ್ತರ್” ಮೇಲೆ FIR ಮಾಡಿಸಿದ ‘ಪರಶುರಾಮ ದುಂಡಿ’…

1 min read
Spread the love

ಕಲಘಟಗಿ: ತಾಲೂಕಿನ ಮುಕ್ಕಲ ಗ್ರಾಮದಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಪಂಚಮಸಾಲಿ ಸಮಾಜದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಶಿಕ್ಷಕರೋರ್ವರ ಮೇಲೆ ಹಾಲಿ ಶಾಸಕರ ಸುತ್ತಮುತ್ತ ಕಾಣಸಿಗುವ ವ್ಯಕ್ತಿಯೋರ್ವರು ಕಲಘಟಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ಎಫ್ಐಆರ್ ಆಗುವಂತೆ ನೋಡಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.

ಆಗಸ್ಟ್ 15 ರಂದು ನಡೆದ ಸ್ವಾತಂತ್ರ್ಯೋತ್ಸವದ ವೇಳೆಯಲ್ಲಿ ಧ್ವಜವನ್ನ ತಲೆಕೆಳಗು ಮಾಡಿ ಹಾರಿಸಲಾಗಿದೆ ಎಂದು ಎರಡು ದಿನಗಳ ನಂತರ ಮುಕ್ಕಲ ಗ್ರಾಮದ ಪರಶುರಾಮ ದುಂಡಿ, ಶಾಲೆಯ ಶಿಕ್ಷಕ ಪ್ರಕಾಶ ಕುಂಬಾರ ಹಾಗೂ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಲಿಂಗರೆಡ್ಡಿ ನಡುವಿನಮನಿ ಎನ್ನುವವರ ಮೇಲೆ ದೂರು ನೀಡಿದ್ದಾರೆ. ಇದಾದ ಮೂರು ದಿನಗಳ ನಂತರ ಅಂದ್ರೇ, 20.08.2022 fir ಮಾಡಲಾಗಿದೆ.

ಕಲಘಟಗಿ ತಾಲೂಕಿನ ಪಂಚಮಸಾಲಿ ಸಮಾಜದಲ್ಲಿ ಕುಂಬಾರ ಕುಟುಂಬ ತಮ್ಮದೇ ಆದ ಗೌರವವನ್ನ ಹೊಂದಿದೆ. ಇಲಾಖೆಯಿಂದ ನಡೆಯುವ ತನಿಖೆಯನ್ನ ಜಟಿಲಗೊಳಿಸಿ, ಶಿಕ್ಷಕ ಪ್ರಕಾಶ ಮೇಲೆ ಒತ್ತಡ ಹಾಕುವ ಹಿಂದಿನ ಉದ್ದೇಶವೇ ಬೇರೆಯಿದೆ ಎಂದು ಹೇಳಲಾಗುತ್ತಿದೆ.

ಕಲಘಟಗಿ ಕ್ಷೇತ್ರದ ಶಾಸಕ ಸಿ.ಎಂ.ನಿಂಬಣ್ಣನವರ ಸುತ್ತಲೂ ಕಂಡು ಬಂದು ಅವರದ್ದೆ ಸಮಾಜದವರ ಮೇಲೆ ಷಢ್ಯಂತ್ರ ರೂಪಿಸಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.


Spread the love

Leave a Reply

Your email address will not be published. Required fields are marked *