ಮುಗದದಲ್ಲಿ “ಅಳಿಯ-ಮಾವನ” ದುರಂತ ಅಂತ್ಯ…

ಧಾರವಾಡ: ತಾಲೂಕಿನ ಮುಗದ ಗ್ರಾಮದ ಹೊನ್ನಮ್ಮನ ಕೆರೆಯಲ್ಲಿ ಈಜಲು ಹೋಗಿದ್ದ ಅಳಿಯನನ್ನ ರಕ್ಷಣೆ ಮಾಡಲು ಹೋಗಿದ್ದ ಮಾವನೂ ನೀರಿನಲ್ಲಿ ಮುಳುಗಿ ಸಾವಿಗೀಡಾದ ಘಟನೆ ನಡೆದಿದೆ.

ದುರ್ಘಟನೆಯಲ್ಲಿ ಧಾರವಾಡದ ಹಾವೇರಿಪೇಟೆಯ ನಿವಾಸಿ ಉಮೇಶ ಮಹಾದೇವಪ್ಪ ಕಳ್ಳಿಮನಿ ಹಾಗೂ ಈತನ ಮಾವ ಮುಗದ ಗ್ರಾಮದ ವಿಠ್ಠಲ ಫಕ್ಕೀರಪ್ಪ ಹೊಸಮನಿ ಸಾವಿಗೀಡಾಗಿದ್ದಾರೆ.

ಧಾರವಾಡದಿಂದ ಬಂದ ಅಳಿಯ ಉಮೇಶ ಕೆರೆಯಲ್ಲಿ ಈಜಲು ಹೋದ ಸಮಯದಲ್ಲಿ ಮುಳುಗುತ್ತಿರುವುದು ಕಂಡು ಬಂದಿದೆ. ಹಾಗಾಗಿ ಆತನನ್ನ ರಕ್ಷಣೆ ಮಾಡಲು ಹೋದ ವಿಠ್ಠಲ ಕೂಡಾ ನೀರಿಗಿಳಿದು ಹೊರಗೆ ಬರದ ಸ್ಥಿತಿ ನಿರ್ಮಾಣವಾಗಿದೆ. ಕೆಲ ಸಮಯದ ನಂತರ ಅಗ್ನಿಶಾಮಕ ದಳ ಹಾಗೂ ಪೊಲೀಸರು ಶವಗಳನ್ನ ಹೊರಗೆ ತೆಗೆದಿದ್ದಾರೆ.
ಪ್ರಕರಣ ಧಾರವಾಡ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದೆ.