Posts Slider

Karnataka Voice

Latest Kannada News

“ಮುಧೋಳ ನಾಯಿ” ತರಬೇತಿಯಲ್ಲಿ ನಪಾಸ್…!

1 min read
Spread the love

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮುಧೋಳ ನಾಯಿಯ ಬಗ್ಗೆ ಮನ್ ಕೀ ಬಾತ್ ನಲ್ಲಿ ಮಾತನಾಡಿದ ನಂತರ ಸಾಕಷ್ಟು ಪ್ರಚಲಿತಕ್ಕೆ ಬಂದಿದ್ದ, ಮುಧೋಳ ನಾಯಿಗಳು ಪೊಲೀಸ್ ತನಿಖೆಗೆ ಬೇಕಾದ ಜಾಣಾಕ್ಷತನವನ್ನ ಹೊಂದಿಲ್ಲವೆಂಬ ನಿರ್ಧಾರಕ್ಕೆ ಐಟಿಬಿಪಿ ಮತ್ತು ಎಸ್ಎಸ್ ಬಿ ಬಂದಿದೆ.

Mudhol Dogs

ಎಂಎಚ್ಎ ಪೊಲೀಸ್ ಕೆ9 ಸೆಲ್ ಮೂಲಕ ಟ್ರೇನಿಂಗ್ ನೀಡಲು ಮುಂದಾಗಿದ್ದ ಎರಡು ವಿಭಾಗಗಳು ಮುಧೋಳ ನಾಯಿಯನ್ನ ಕಳೆದ ವರ್ಷದಿಂದ ತರಬೇತಿ ನೀಡುತ್ತಿತ್ತು. ಈ ಹಿನ್ನೆಲೆಯಲ್ಲಿ ಮುಧೋಳ ನಾಯಿಯ ಬಗ್ಗೆ ಅವರು ವಿವರವಾಗಿ ಮಾಹಿತಿಯನ್ನ ನೀಡಿದ್ದಾರೆ.

ನಾಯಿಯೂ ನಂಬಿಕಸ್ಥ ಮತ್ತು ಜೋರಾಗಿ ಓಡಬಲ್ಲದು ಎಂಬುದನ್ನ ಹೊರತುಪಡಿಸಿದರೇ, ಅದರ ಜ್ಞಾಪಕ ಶಕ್ತಿ ಅಷ್ಟೊಂದು ಚೆನ್ನಾಗಿಲ್ಲವೆಂದು ಹೇಳಿಕೊಂಡಿವೆ. ಅಷ್ಟೇ ಅಲ್ಲ, ಪೊಲೀಸರಿಗೆ ಅವಶ್ಯವಿರುವ ತನಿಖೆಯ ಜಾಡು ಹಿಡಿಯುವ ಕ್ರಮಕ್ಕೆ ಮುಧೋಳ ನಾಯಿಯೂ, ಮುಂದಾಗುವುದಿಲ್ಲವೆಂದು ಹೇಳಿದ್ದಾರೆ.

ಎಸ್ಎಸ್ ಬಿಯ ಅಸಿಸ್ಟಂಟ್ ಕಮಾಂಡೆಂಟ್ ಪಂಕಜಕುಮಾರ ಹಾಗೂ ಕಮಾಂಡೆಂಟ್ ಪಂಕಜಕುಮಾರ, ಕಳೆದ ಜನೇವರಿಯಲ್ಲಿ ನ್ಯಾಷನಲ್ ಪೊಲೀಸ್ ಕೆ9 ಜನರಲ್ ದಲ್ಲಿ ಮುಧೋಳ ನಾಯಿಯ ಬಗ್ಗೆ ಬರಹವನ್ನ ಪ್ರಕಟಿಸಿದ್ದರು. ಅದರ ಪ್ರಕಾರ ಮುಧೋಳ ನಾಯಿಗೆ ಮರೆವು ಹೆಚ್ಚಿದೆ. ತರಬೇತಿ ನೀಡುವಾಗ, ಬೇರೆ ಕಡೆ ಹೋಗುವ ಮನಸ್ಥಿತಿಯನ್ನ ಹೊಂದಿದೆ ಎಂದಿದ್ದಾರೆ.

ಈ ಮೂಲಕ ರಾಷ್ಟ್ರದಲ್ಲಿ ಮುಧೋಳ ನಾಯಿ ತನ್ನ ಚಾಕ್ಯಾಚಕ್ಯತೆಯನ್ನ ಪ್ರದರ್ಶನ ಮಾಡಬಹುದೆಂಬ ಆಶಾಭಾವನೆ ಕಮರಿದಂತಾಗಿದೆ.


Spread the love

Leave a Reply

Your email address will not be published. Required fields are marked *