ಸಚಿವರಿಂದ ಬೈಸಿಕೊಂಡ ಮಹಿಳೆ: ಎಲ್ಲೇಲ್ಲಿ ಅರ್ಜಿ ಹಾಕಿ ಹಣ ಪಡೀತಾರಂತೆ ನಮಗೆ ಗೊತ್ತು: ಸಂಸದ ಮುನಿಸ್ವಾಮಿ ಕಿಡಿ

ಕೋಲಾರ: ಕಾಂಗ್ರೆಸ್ ನವರ ವಿರುದ್ಧ ನಾವು ಪ್ರತಿಭಟನೆ ಮಾಡಿದಾಗ ಎಷ್ಟು ಜನ ರಾಜೀನಾಮೆ ಕೊಟ್ಟಿದ್ದಾರೆ. ನಮ್ಮ ಹೆಣ್ಣು ಮಗಳು ಅನ್ನೋ ಸಲಿಗೆಯಿಂದ ಮಾಧುಸ್ವಾಮಿ ಮಾತನಾಡಿರಬಹುದು. ನ್ಯಾಯವಾಗಿ ಮಾತನಾಡಮ್ಮ ಅಂತ ನಾವು ಆ ಹೆಣ್ಣು ಮಗಳಿಗೆ ಹೇಳಿದ್ವಿ. ಆಕೆ ಕೇವಲ ಹೋರಾಟ ಮಾಡಿಕೊಂಡಿದ್ರೆ ನಾವು ಬೆಂಬಲ ನೀಡ್ತೇವೆ. ಆದ್ರೆ, ಆಕೆ ಎಲ್ಲೆಲ್ಲಿ ಅರ್ಜಿ ಹಾಕಿ ಹಣ ಕೇಳ್ತಾರೆ ಅಂತ ನಮಗೂ ಗೊತ್ತು ಎಂದು ಸಂಸದ ಮುನಿಸ್ವಾಮಿ ಟೀಕಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದರು, ಸರಿ ಮಾಡ್ತೇನೆ ಅಂದ್ರು ಸಚಿವರಿಗೆ ಉದ್ರೇಕ ಬರೋಹಾಗೆ ಆಕೆ ಮಾತನಾಡಿದ್ದಾರೆ. ನನಗೆ ಹೇಳಿ ಸಮಸ್ಯೆ ಬಗೆಹರಿಸಿಕೊಳ್ಳಬಹುದಿತ್ತು ?. ಇದುವರೆಗೂ ಒತ್ತುವರಿ ಸಮಸ್ಯೆ ಕುರಿತು ನನ್ನ ಗಮನಕ್ಕೆ ತಂದಿಲ್ಲ. ಕೇವಲ ಪ್ರಚಾರಕ್ಕಾಗಿ ಏನೋ ಮಾಡೋದಲ್ಲ. ಅವರು ಸತ್ಯ ಹರಿಶ್ಚಂದ್ರರಾಗಿದ್ರೆ ಇವೆಲ್ಲಾ ಮಾಡಲಿ ಎಂದಿದ್ದಾರೆ.