ತಾಯಿಯ ಶವ ತರಲು ಆಗದ ವಿಕಲಚೇತನ ಮಗ: ತವರಲ್ಲೇ ಶವ ಸಂಸ್ಕಾರ

ಯಾದಗಿರಿ: ರಸ್ತೆ ಅಪಘಾತದಲ್ಲಿ ಬಳ್ಳಾರಿ ಬಳಿಯ ಶಿರಗುಪ್ಪ ತಾಲೂಕಿನ ನಾಡಂಗಿ ಗ್ರಾಮದಲ್ಲಿ ತೀರಿಕೊಂಡಿರುವ ತಾಯಿಯನ್ನ ತನ್ನೂರಿಗೆ ತರಲು ವಿಕಲಚೇತನ ಯುವಕನೋರ್ವ ಪರದಾಡುತ್ತಿರುವ ಪ್ರಕರಣ ನಡೆದಿದೆ.
ಯಾದಗಿರಿ ಜಿಲ್ಲೆಯ ಬಾಡಿಹಾಳ ಗ್ರಾಮದ ರುದ್ರಮ್ಮ, ಇತ್ತೀಚೆಗೆ ತನ್ನ ತವರೂರಿಗೆ ಹೋಗಿದ್ದಳು. ಅಲ್ಲೇ ಅಪಘಾತ ನಡೆದು ಸಾವನ್ನಪ್ಪಿದ್ದಾರೆ. ಹಾಗಾಗಿ, ತನ್ನ ತಾಯಿಯ ಶವವನ್ನ ತನ್ನೂರಿಗೆ ತರಲು ಮಗ ಮಲ್ಲಿಕಾರ್ಜುನ ಪ್ರಯತ್ನ ಪಟ್ಟರೂ ಜಿಲ್ಲಾಡಳಿತ ಅದಕ್ಕೆ ಪರವಾನಿಗೆ ಕೊಡುತ್ತಿಲ್ಲ. ಹೀಗಾಗಿ ವಿಕಲಚೇತನ ಯುವಕ ಅಧಿಕಾರಿಗಳ ಮುಂದೆ ಕಣ್ಣೀರು ಹಾಕುವ ಸ್ಥಿತಿ ಬಂದಿದ್ದು, ಯಾವುದೇ ಪ್ರಯೋಜನವಾಗುತ್ತಿಲ್ಲ.