ರಾಮಾಪುರ ಲವ್ಸ್ ಮೊರಬ: ಆಟೋ ಡ್ರೈವರ್ ನ ಗೋಲ್ಡ್ ಲವ್… ತಲ್ವಾರ ಹಿಂದಿನ ಅಸಲಿ ಕಹಾನಿ..
1 min readಹುಬ್ಬಳ್ಳಿ: ದೇಶಪಾಂಡೆನಗರದಲ್ಲಿ ಇಂದು ಬೆಳ್ಳಂಬೆಳಿಗ್ಗೆ ನಡೆದ ತಲ್ವಾರ ದಾಳಿಯಲ್ಲಿ ಗಾಯಗೊಂಡಿರುವ ಮತ್ತೂ ತಲ್ವಾರ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಪ್ರೀತಿ-ಪ್ರೇಮದ ಕಹಾನಿಯಿದೆ ಎನ್ನುವುದು ಕರ್ನಾಟಕವಾಯ್ಸ್.ಕಾಂ ಗೆ ಲಭಿಸಿದೆ.
ಆತ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ರಾಮಾಪುರ ಗ್ರಾಮದ ಇಸ್ಮಾಯಿಲ ಖಲಂದರ ಕುಂಕೂರ, ಈಕೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಗ್ರಾಮದವಳು. ಅವರಿಬ್ಬರು ಸುಮಾರು ಮೂರ್ನಾಲ್ಕು ವರ್ಷದ ಪ್ರೀತಿ.. ಪ್ರೇಮ ಇತ್ಯಾದಿ.
ಹುಬ್ಬಳ್ಳಿಯ ದೇಶಪಾಂಡೆನಗರದಲ್ಲಿನ ತಾಯಿಯ ಬಳಿಯಿದ್ದ ಹಲ್ಲೆಗೊಳಗಾದ ಯುವತಿ ನಗರದ ಪ್ರತಿಷ್ಠಿತ ಗೋಲ್ಡ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಳೆ. ಈತ ಮನೆಯವರು ಕೊಡಿಸಿದ ಆಟೋವನ್ನ ಓಡಿಸಿಕೊಂಡು ಜೀವನ ನಡೆಸುತ್ತಿದ್ದ. ಇವರಿಬ್ಬರ ಪ್ರೀತಿಗೆ ‘ಗ್ಯಾಪ್’ ಮೂಡಿಸಿದ್ದು ಕೊರೋನಾ ಎಂಬ ಮಹಾಮಾರಿ.
ಆಕೆ ತನ್ನೂರನ್ನ ಬಿಟ್ಟು ಬರದ ಸ್ಥಿತಿ ನಿರ್ಮಾಣವಾಯಿತು. ಈತನ ಆಟೋ ಮನೆಯಲ್ಲೇ ನಿಲ್ಲುವಂತಾಯಿತು. ಆಗ ಇಬ್ಬರು ಭೇಟಿಯಾಗುವುದು ಕಡಿಮೆಯಾಗತೊಡಗಿತು. ಆಗ ರಾಮಾಪುರದ ಇಸ್ಮಾಯಿಲನಿಗೆ ಸಂಶಯ ಶುರುವಾಯಿತು. ಆ ಸಂಶಯದ ಭೂತವೇ ಇಂದು ಇಂತಹ ಕೃತ್ಯ ಮಾಡಲು ಪ್ರೇರಪಣೆ ನೀಡಿದೆ ಎಂದು ಹೇಳಲಾಗುತ್ತಿದೆ.
ಯುವಕ-ಯುವತಿಯ ಎರಡು ಗ್ರಾಮಗಳಲ್ಲಿ ಮನೆಯವರು ಈ ಘಟನೆಯಿಂದ ತತ್ತರಿಸಿ ಹೋಗಿದ್ದಾರೆ. ಎಲ್ಲರೂ ಹುಬ್ಬಳ್ಳಿಯತ್ತ ಪಯಣ ಬೆಳೆಸಿದ್ದಾರೆ. ಉಪನಗರ ಠಾಣೆಯಲ್ಲಿ ಇಸ್ಮಾಯಿಲ್ ಪೊಲೀಸ್ ಕಸ್ಟಡಿಯಲ್ಲಿದ್ದರೇ, ಆತನ ಜೀವ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿದೆ..