“ಮರಿಮಂಗ”ನ ಬೇಟೆಗೆ “ಹುಲಿ” ಹೊಂಚು- ಅದೃಷ್ಟದಾಟದಲ್ಲಿ ಮಕಾಡೆ ಮಲಗಿದ ಹುಲಿ… ಗಮನಸೆಳೆಯುತ್ತಿರುವ “ವಿನೋದ ಅಸೂಟಿ” Status…!!!!

ಧಾರವಾಡ: ನವಲಗುಂದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಂದೇ ಪರಿಗಣಿಸ್ಪಟ್ಟಿದ್ದ ವಿನೋದ ಅಸೂಟಿಯವರ ವಾಟ್ಸಾಫ್ ಸ್ಟೇಟ್‌ಸ್ ಸಾಕಷ್ಟು ಗಮನ ಸೆಳೆಯುತ್ತಿದ್ದು, ಹುಲಿ ಎಂದು ಮೆರೆಯುತ್ತಿರುವವರಿಗೆ ಕಾಲವೇ ಉತ್ತರ ಕೊಡಲಿದೆ ಎಂಬ ಮಾತನ್ನ ಮಾರ್ಮಿಕವಾಗಿ ಹೇಳಲಾಗಿದೆ.
ಹೌದು… ಕಾಂಗ್ರೆಸ್ ಪಕ್ಷದ ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ವಿನೋದ ಅಸೂಟಿ ಅವರ ಮೊಬೈಲ್‌ನಲ್ಲಿ ಕಂಡು ಬಂದಿರುವ ಈ ವೀಡಿಯೋ ಹಲವು ರೀತಿಯಲ್ಲಿ ವ್ಯಾಖ್ಯಾನ ಮಾಡಲಾಗುತ್ತಿದೆ.
ತಾಯಿ ಮಂಗನ ಜೊತೆಯಿದ್ದ ಮರಿಯೊಂದನ್ನ ಹುಲಿ ಎತ್ತಿಕೊಂಡು ಮರದ ಮೇಲೆ ಹೋಗುವಾಗ ಟೊಂಗೆಯೊಂದಿಗೆ ಜೋತು ಬೀಳುವ ಮರಿಮಂಗನನ್ನ ಆನೆಯ ಮರಿಯೊಂದು ತನ್ನ ಬೆನ್ನ ಮೇಲೆ ಕೂಡಿಸಿಕೊಂಡು ಓಡುತ್ತೆ. ಅದಾಗಲೂ ವಂಚಕ ಹುಲಿ ಬೆನ್ನು ಬಿದ್ದಾಗ ಮರಿ ಆನೆಯನ್ನ ನಂಬಿದ ಆನೆಯ ಬಳಗ ಹುಲಿಯನ್ನ ತುಳಿದು, ಒದ್ದು ಪ್ರಾಣ ಹೋಗುವಂತೆ ಮಾಡತ್ತೆ. ಅಲ್ಲಿಗೆ ವೀಡಿಯೋ ಕೊನೆಗೊಳತ್ತೆ.
ಇಲ್ಲಿರುವ ವೀಡಿಯೋದಲ್ಲಿ ಬರುವ ಟೊಂಗೆಯನ್ನ ಕಾಂಗ್ರೆಸ್ ಪಕ್ಷವೆಂದು ತಿಳಿದುಕೊಂಡು, ಮರಿಆನೆಯನ್ನ ಪಕ್ಷದ ಕಾರ್ಯಕರ್ತನೆಂದೂ, ಹಿಂಡಾನೆಯನ್ನ ಪಕ್ಷದ ಸಾವಿರಾರೂ ಕಾರ್ಯಕರ್ತರು ಎಂದುಕೊಂಡರೇ… ನೋಡುಗರಿಗೆ ಮರಿಮಂಗ ಯಾರೂ ಹುಲಿ ಎಂದುಕೊಳ್ಳುವವರು ಯಾರೂ ಎಂಬುದನ್ನ ಊಹಿಸಲು ಸರಳವಾಗತ್ತಷ್ಟೇ.