“Money ಡಬ್ಲಿಂಗ್ ಹಣ ಸುಲಿಗೆ”- PSI ಸೇರಿ ಮೂವರು ಕಾನ್ಸಟೇಬಲ್ ಅಮಾನತ್ತು…

ಮೈಸೂರು : ನಾಲ್ವರು ಪೊಲೀಸರ ವಿರುದ್ಧ ಮನಿ ಡಬ್ಲಿಂಗ್ ಕೇಸಲ್ಲಿ ಸುಲಿಗೆ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಚಾಮರಾಜನಗರ ಜಿಲ್ಲೆಯಲ್ಲಿ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಗಣಿ & ರಿಯಲ್ ಎಸ್ಟೇಟ್ ಉದ್ಯಮಿ ಸಚ್ಚಿದಾನಂದ ಮೂರ್ತಿ ಎಂಬುವವರು ದೂರು ಕೊಟ್ಟ ಹಿನ್ನೆಲೆ ನಾಲ್ವರು ಪೊಲೀಸರ ಸಸ್ಪೆಂಡ್ ಮಾಡಲಾಗಿದ್ದು, ಚಾಮರಾಜನಗರದ ಸಿಇಎನ್ ಠಾಣೆಯ PSI ಅಯ್ಯನಗೌಡ, ಕಾನ್ಸ್‌ಟೇಬಲ್‌ಗಳಾದ ಮೋಹನ್, ಬಸವಣ್ಣ, ಮಹೇಶ್ ಅವರನ್ನು ಅಮಾನತು ಮಾಡಿದ್ದಾರೆ. ಕೇಸ್ ದಾಖಲಾಗುತ್ತಿದ್ದಂತೆ ಪೊಲೀಸರು ತಲೆ ಮರೆಸಿಕೊಂಡಿದ್ದಾರೆ.
ಪೊಲೀಸರು, ಸಚ್ಚಿದಾನಂದ ಮೂರ್ತಿಗೆ ಬೆದರಿಸಿ ಲಕ್ಷ ಲಕ್ಷ ಹಣ ಪೀಕಿಸಿದ್ದು, PSI ಅಯ್ಯನಗೌಡ & ಟೀಂ 3.70 ಲಕ್ಷ ಗೂಗಲ್ ಪೇ ಮಾಡಿಸಿಕೊಂಡಿತ್ತು. ನಂತರ ಉದ್ಯಮಿ ಸಚ್ಚಿದಾನಂದ ಮೂರ್ತಿ ಚಾಮರಾಜನಗರ ಠಾಣೆಗೆ ದೂರು ಕೊಟ್ಟಿದ್ದು, ದೂರಿನ ಆಧಾರದ ಮೇಲೆ ನಾಲ್ವರು ಪೊಲೀಸರನ್ನು ಅಮಾನತು ಮಾಡಿ ಚಾಮರಾಜನಗರ ಎಸ್ಪಿ ಡಾ.ಬಿ.ಟಿ.ಕವಿತಾ ಆದೇಶ ಹೊರಡಿಸಿದ್ದಾರೆ.