ಸೋಮವಾರದಿಂದ ಕಡಲೆ ಖರೀದಿ ಆರಂಭ: ಶಾಸಕ ಮುನೇನಕೊಪ್ಪರಿಂದ ರೈತರಿಗೆ ಮಾಹಿತಿ..!

ಧಾರವಾಡ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಸೋಮವಾರದಿಂದ ಕಡಲೆ ಖರೀದಿ ಪ್ರಾರಂಭವಾಗಲಿದ್ದು, ಬರುವ ಮೇ 14 ರ ವರೆಗೆ ಖರೀದಿಯನ್ನ ಕೇಂದ್ರ ಸರಕಾರದ ಯೋಜನೆಯಡಿ ಮಾಡಲಾಗುತ್ತಿದೆ ಎಂದು ನವಲಗುಂದ ಕ್ಷೇತ್ರದ ಶಾಸಕ ಹಾಗೂ ಮೂಲಭೂತ ಸೌಕರ್ಯಗಳ ನಿಗಮದ ಅಧ್ಯಕ್ಷ ಶಂಕರ ಪಾಟೀಲಮುನೇನಕೊಪ್ಪ ಮಾಹಿತಿಯನ್ನ ನೀಡಿದ್ದಾರೆ.
ಅನ್ನದಾತನ ಹಿಂಗಾರಿ ಹಂಗಾಮಿನ ಕಡಲೆಗೆ ಬೆಂಬಲ ಬೆಲೆಯನ್ನ ನಿಗದಿ ಪಡಿಸಲಾಗಿದ್ದು, ಪ್ರತಿ ರೈತರಿಂದಲೂ ಖರೀದಿಯನ್ನ ಮಾಡಲಾಗುತ್ತದೆ ಎಂದು ಶಾಸಕರು ಹೇಳಿದ್ದಾರೆ.
ಶಾಸಕ ಶಂಕರ ಪಾಟೀಲಮುನೇನಕೊಪ್ಪ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು ಹೀಗಿದೆ ನೋಡಿ..
ಫೆಬ್ರುವರಿ 15 ರಿಂದ ಮೇ14 ರ ವರೆಗೆ ಕಡಲೆ ಖರೀದಿ ಪ್ರಾರಂಭ-
ಅನ್ನದಾತನ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಬೆಳೆಗಳಿಗೆ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಬೆಂಬಲ ಬೆಲೆ ಯೋಜನೆಯಡಿ ರಾಜ್ಯ ಸರಕಾರವು ಹಿಂಗಾರು ಹಂಗಾಮಿನ ಕಡಲೆಯನ್ನು ಪ್ರತಿ ಕ್ವಿಂಟಾಲಿಗೆ ರೂ.5100/-ಗಳ ಬೆಂಬಲ ಬೆಲೆಯಂತೆ ಒಟ್ಟು 1,67,000 ಮೆಟ್ರಿಕ್ ಟನ್ ಖರೀದಿ ಮಾಡಲು ನಿರ್ಧರಿಸಿದ್ದು, ಪ್ರತಿ ಎಕರೆಗೆ 4 ಕ್ವಿಂಟಲ್ ಹಾಗೂ ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಲ್ ಖರೀದಿಗೆ ನಿಗದಿಪಡಿಸಲಾಗಿದೆ.
ಕಡಲೆ ಖರೀದಿಗೆ ನೋಂದಣಿ ದಿನಾಂಕ :
15/02/2021 ರಿಂದ 29/04/2021 ರ ವರೆಗೆ
ಕಡಲೆ ಖರೀದಿಯ ದಿನಾಂಕ :
15/02/2021 ರಿಂದ 14/05/2021 ರ ವರೆಗೆ
ಸಮಸ್ತ ರೈತ ಬಾಂಧವರು ಪ್ರಸಕ್ತ ವರ್ಷದ ಕಡಲೆ ಖರೀದಿ ಯೋಜನೆಯ ಸದುಪಯೋಗವನ್ನು ಪಡೆದುಕೂಳ್ಳಲು ವಿನಂತಿ.