ಗಾಂಧಿಗಾಗಿ ಮೋದಿ ಬಳಿ ಹೊರಟ: ರೋಣ ಟು ನವದೆಹಲಿ ಪೈದಲ್ ಚಲೋ…!

ಹುಬ್ಬಳ್ಳಿ: ಮಹಾತ್ಮಾಗಾಂಧಿಯಾಗಿ ಹೆಜ್ಜೆ ಹಾಕುತ್ತಿದ್ದರೇ ನೋಡುಗರಲ್ಲಿ ಅದೇನೋ ಪುಳಕ. ಆ ಮಹಾನ ವ್ಯಕ್ತಿಯನ್ನ ಯಾರದೇ ದೇಹದಲ್ಲಿ ಕಂಡರೂ ಪೂಜನೀಯ ಭಾವ ಮೂಡುವುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗಾಗಿಯೇ ವ್ಯಕ್ತಿಯೋರ್ವ ಮಹಾತ್ಮಾ ಗಾಂಧೀಜಿಯವರ ವೇಷದಲ್ಲೇ ನವದೆಹಲಿಗೆ ಹೊರಟು ನಿಂತಿದ್ದಾರೆ. ಆ ಮೂಲಕ ಮಹಾನ್ ಚೇತನವನ್ನ ಮತ್ತಷ್ಟು ಜನರಿಗೆ ತಲುಪಿಸುವ ಭಾವನೆ ಹೊತ್ತು ಹೊರಟಿದ್ದಾರೆ.
ಗದಗ ಜಿಲ್ಲೆ ರೋಣ ತಾಲೂಕಿನ ಕರ್ಕಿಕಟ್ಟಿ ಗ್ರಾಮದ ಮುತ್ತಣ್ಣ ತೀರ್ಲಾಪುರ ಎಂಬ ವ್ಯಕ್ತಿಯೇ ಹುಬ್ಬಳ್ಳಿಯಿಂದ ದೆಹಲಿವರೆಗೂ ಕಾಲ್ನಡಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ಹೊರಟಿದ್ದಾರೆ. ನಮಗೆಲ್ಲ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಡಿದ ಅದೇಷ್ಟೋ ದೇಶಭಕ್ತರ ನಡುವೆ ನೆನಪಾಗೋದು ಅಂದ್ರೆ ರಾಷ್ಟ್ರಪಿತ ಗಾಂಧೀಜಿ. ಅವರ ಆದರ್ಶ ಪಾಲನೆ ಮಾಡುವುದರಲ್ಲೇ ಇಂದಿಗೂ ದೇಶ ಮುಂದುವರೆಯುತ್ತಿದೆ.
ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಗಾಂಧಿ ತತ್ವಗಳ ಜೊತೆಗೆ ಕೆಲವೊಂದಿಷ್ಟು ಮಹತ್ಬದ ವಿಷಯಗಳನ್ನ ತಲುಪಿಸುವ ನಿಟ್ಟಿನಲ್ಲಿ ಮುತ್ತಣ್ಣ ತಿರ್ಲಾಪುರ ಎಂಬ ಗಾಂಧಿ ಪ್ರೇಮಿ, ಅವರ ರೀತಿಯಲ್ಲಿ ವೇಷ ಭೂಷಣವನ್ನು ಧರಿಸಿ ಹುಬ್ಬಳ್ಳಿಯಿಂದ ದೆಹಲಿವರೆಗೂ ಪಾದಯಾತ್ರೆ ಮೂಲಕ ಮೌನವಾಗಿ ಸಂದೇಶ ಸಾರುವ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.
ಹುಬ್ಬಳ್ಳಿಯಿಂದ ಹೊರಡುತ್ತಿರುವ ಮುತ್ತಣ್ಣ ತೀರ್ಲಾಪುರ ಪ್ರಧಾನಿ ನರೇಂದ್ರ ಮೋದಿಯವರನ್ನ ಭೇಟಿಯಾಗಿಯೂ ಗಾಂಧೀಜಿ ಸ್ಮರಣೆ ಮಾಡಲಿದ್ದಾರೆ. ಇಡೀ ದೇಶದಲ್ಲಿ ಗಾಂಧಿ ತತ್ವದಿಂದಲೇ ಸಾಕಾರ ಸಿಗುವುದು ಎಂಬ ಸಂದೇಶ ಅದ್ರಲ್ಲಿ ಇರಲಿದೆ.