ಪ್ರಧಾನಿ ಮೋದಿ ಟೀಕೆ: ಶಿಕ್ಷಕಿ ಅಮಾನತ್ತು ಮಾಡಿದ ಡಿಡಿಪಿಐ
1 min readರಾಯಚೂರು: ಸರಕಾರಿ ನೌಕರಿಯಲ್ಲಿಂದುಕೊಂಡೆ ವಾಟ್ಸಾಫ್ ಗ್ರೂಫಗಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಧರ್ಮದ ಬಗ್ಗೆ ಪ್ರಚಾರ ಮಾಡಿದ್ದಾರೆಂದು ರಾಯಚೂರು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಎಚ್.ಗೋನಾಳರು , ಸರಕಾರಿ ಉರ್ದು ಶಾಲೆಯ ಶಿಕ್ಷಕಿಯನ್ನ ಅಮಾನತ್ತು ಮಾಡಿ ಆದೇಶ ಹೊರಡಿದ್ದಾರೆ.
ರಾಯಚೂರು ನಗರದ ಆಂದ್ರೋನ್ ಕಿಲ್ಲಾ ಸರಕಾರಿ ಉರ್ದು ಶಾಲಾ ಶಿಕ್ಷಕಿ ಖಮರುನ್ನಿಸ ಬೇಗಂ ಉರ್ದು ಕ್ಲಸ್ಟರ್ 2ಆರ್ ಸಿಆರ್ ವಾಟ್ಸಾಫ್ ಗ್ರೂಫನಲ್ಲಿ ದೇಶದ ಶಾಂತಿಗೆ ದಕ್ಕೆ ತರುವಂತವಹದನ್ನ ಮಾಡಿದ್ದಾರೆ. ಪಕ್ಷ ಹಾಗೂ ಧರ್ಮದ ಬಗ್ಗೆ ಧ್ವೇಷ ಮನೋಭಾವನೆ ಉಂಟು ಮಾಡುವ ರೀತಿಯಲ್ಲಿ ನಡೆದುಕೊಂಡಿದ್ದಾರೆಂದು ವಿವರವಾಗಿ ಡಿಡಿಪಿಐ ಹೇಳಿದ್ದಾರೆ.
ಸಹಶಿಕ್ಷಕಿ ಖಮರುನ್ನಿಸ ಬೇಗಂರನ್ನ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತ್ತು ಮಾಡಿರುವ ಡಿಡಿಪಿಐ ಗೋನಾಳ, ಆಪಾದಿತ ನೌಕರರು ನಾಗರಿಕ ಸೇವಾ ನಿಯಮಗಳ 1957ರ ನಿಯಮ 98ರ ಪ್ರಕಾರ ಜೀವನಾಧಾರ ಭತ್ಯೆ ಪಡೆಯಲು ಅರ್ಹರಿದ್ದಾರೆಂದು ಅಮಾನತ್ತು ಆದೇಶದಲ್ಲಿ ತಿಳಿಸಿದ್ದಾರೆ.
ಸರಕಾರಿ ಶಾಲೆಯಲ್ಲಿದ್ದು ದೇಶ ಧರ್ಮದ ಬಗ್ಗೆ ವಾಟ್ಸಾಫ್ ಗ್ರೂಫಗಳಲ್ಲಿ ಹಾಕಿರುವುದು ಹಲವೂ ಅನುಮಾನಗಳಿಗೆ ಕಾರಣವಾಗಿದೆ. ರಕ್ಷಣಾ ಸಚಿವರು, ಗೃಹ ಸಚಿವರು ಅಲ್ಲದೇ ಘನ ಸರ್ವೋಚ್ಚ ನ್ಯಾಯಾಲಯದ ವಿರುದ್ಧವೂ ಉರ್ದು ಭಾಷೆಯಲ್ಲಿ ಹಾಕಿದ್ದಾರೆಂದು ಡಿಡಿಪಿಐ ಅಮಾನತ್ತು ಪತ್ರದಲ್ಲಿ ಮಾಹಿತಿ ನೀಡಿದ್ದಾರೆ.