ಇದು ನೆಹರು ಭಾರತವಲ್ಲ, ಮೋದಿ ಭಾರತ: ಸಂಸದ ಪ್ರತಾಪ ಸಿಂಹ
ಮೈಸೂರು: ಇದು 1962ರ ಭಾರತವಲ್ಲ. ಈಗ ಪ್ರಧಾನಿಯಾಗಿರುವುದು ನೆಹರು ಅಲ್ಲ, ಈಗ ಪ್ರಧಾನಿಯಾಗಿರುವುದು ಮೋದಿ. ನಮ್ಮ ದೇಶ ಎಲ್ಲದಕ್ಕೂ ಸಜ್ಜಾಗಿದೆ. ಸೈನಿಕರ ಆತ್ಮಸ್ಥೈರ್ಯ ಆಗಸದೆತ್ತರವಿದೆ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.
ನಮ್ಮ ದೇಶದೊಳಗಡೆ ನಮಗಿಂತ ಚೀನಾ ಶಕ್ತಿಶಾಲಿ ಎಂದು ಹೇಳುವ ಕೆಟ್ಟ ಮನಸ್ಥಿತಿಯ ಜನ ಇದ್ದಾರೆ. ಅವರಿಗೆ ನಮಗಿಂತ ಚೀನಾ ಬಗ್ಗೆಯೆ ಹೆಚ್ಚು ಪ್ರೀತಿ ಇದ್ದಂತಿದೆ, ಇಂತಹ ಮಾತುಗಳಿಗೆ ನಾವು ಬೆಲೆ ಕೊಡಬೇಕಾಗಿಲ್ಲ. ಗಡಿಯಲ್ಲಿ ಸಂಘರ್ಷ ಉಂಟಾದ ತಕ್ಷಣಕ್ಕೆ ಯುದ್ಧ ಎನ್ನುವ ಮನಸ್ಥಿತಿ ಬೇಡ, ಆದರೆ ಯುದ್ಧಕ್ಕೂ ನಾವು ಸನ್ನದ್ದವಾಗಿದ್ದೇವೆ ಎಂದರು.
ನಾವು ಕೂಡ ಚೀನಾದಂತೆ ಅಣ್ವಸ್ತ್ರವನ್ನು ಹೊಂದಿದ್ದೇವೆ. ನಾವು ಶಕ್ತಿಶಾಲಿಗಳು, ಸಮರ್ಥ ನಾಯಕನ ಕೈಯಲ್ಲಿ ದೇಶವಿದೆ. ಈ ಹಿಂದೆ ಚೀನಾ ಭಾರತದ ಗಡಿಯಲ್ಲಿ ಸಮಸ್ಯೆ ಉಂಟಾದಾಗಲು ಅದರ ವಿವರಣೆ ಕೇಳಲು ಚೀನಾ ಅಂಬಾಸಿಡರ್ ಕಚೇರಿಗೆ ರಾಹುಲ್ ಗಾಂಧಿ ಹೋಗಿದ್ದರು ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿದರು.