Posts Slider

Karnataka Voice

Latest Kannada News

ದೇಶಕ್ಕೆ ಮಾಡೆಲ್ ಆಯ್ತು ನಮ್ಮ ಕರ್ನಾಟಕ: ಕೇಂದ್ರಕ್ಕೆ ಧನ್ಯವಾದ ಅರ್ಪಿಸಿದ ಸಿಎಂ

1 min read
Spread the love

ಬೆಂಗಳೂರು: ಕೊರೋನಾ ನಿಯಂತ್ರಿಸಲು ಕರ್ನಾಟಕ ಮಾಡೆಲ್ ಅನುಸರಿಸಿ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಇಲಾಖೆಯಿಂದ ಇತರೆ ರಾಜ್ಯಗಳಿಗೆ, ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ. ಕರ್ನಾಟಕದಲ್ಲಿ ಟ್ರೇಸಿಂಗ್ ವ್ಯವಸ್ಥಿತವಾಗಿ ನಡೆಯುತ್ತಿದೆ. ನಿಖರವಾಗಿ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಗಳನ್ನು ಪತ್ತೆ ಹಚ್ಚಲಾಗ್ತಿದೆ. ಕಾಂಟ್ಯಾಕ್ಟ್ ಟ್ರೇಸಿಂಗ್ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್ ಅಪ್ಲಿಕೇಶನ್‌ಗಳನ್ನು ಬಳಸಲಾಗ್ತಿದೆ. ಕೊಳೆಗೇರಿಗಳಲ್ಲಿ ಸೋಂಕಿನ ಹರಡುವಿಕೆಯನ್ನು ಕಡಿಮೆ ಮಾಡಲು ಕರ್ನಾಟಕಕ್ಕೆ ಸಾಧ್ಯವಾಗಿದೆ. ಕರ್ನಾಟಕಕ್ಕೆ ಹಿಂದಿರುಗಿದವರನ್ನು ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವುದನ್ನು  ಕಡ್ಡಾಯಗೊಳಿಸಲಾಗಿದೆ.

‘ಕ್ಯಾರೆಂಟೈನ್ ವಾಚ್ ಆ್ಯಪ್ ಅನ್ನು ಬಳಸಲಾಗುತ್ತಿದೆ. ಮನೆ ಮನೆ ಸಂಪರ್ಕಕ್ಕಾಗಿ  ಮೊಬೈಲ್ ತಂಡಗಳನ್ನು ರಚಿಸಿದೆ. ಫೋನ್ ಮೂಲಕ ಅಥವಾ ಭೌತಿಕವಾಗಿ ಮನೆ ಮನೆ‌ ಸರ್ವೇಯನ್ನು ಮಾಡಲಾಗುತ್ತೆ. ಕರ್ನಾಟಕದ ಈ ಮಾಡೆಲ್ ಅನ್ನು ಅಳವಡಿಸಿಕೊಳ್ಳಿ ಎಂದು ಪತ್ರ.

ಕೇಂದ್ರ ಸರ್ಕಾರದ ಶ್ಲಾಘನೆಗೆ ಸಿಎಂ ಬಿಎಸ್ ಯಡಿಯೂರಪ್ಪ ಸಂತಸ

ಸೋಂಕು ಹರುಡುವಿಕೆ ವಿಚಾರದಲ್ಲಿ ಕರ್ನಾಟಕ ಮಾದರಿ ಎಂದು ಹೇಳಿರುವುದಕ್ಕೆ ಸಿಎಂ ಸಂತಸ.

ಇದಕ್ಕೆ ಕಾರಣವಾದ ಎಲ್ಲರಿಗೂ ಅಭಿನಂದನೆಗಳನ್ನ ತಿಳಿಸಿದ ಸಿಎಂ ಯಡಿಯೂರಪ್ಪ. ಹಂತ ಹಂತವಾಗಿ  ಲಾಕ್‌ಡೌನ್ ತೆರವಾಗ್ತಿರುವ ಸಂದರ್ಭದಲ್ಲಿ ಇನಷ್ಟು ಎಚ್ಚರಿಕೆಯಿಂದಿರಬೇಕು ಎಂದು ಬಿಎಸ್‌ವೈ ಮನವಿ


Spread the love

Leave a Reply

Your email address will not be published. Required fields are marked *

You may have missed