Posts Slider

Karnataka Voice

Latest Kannada News

ನಾರಿ ಮುನಿದರೆ ಮಾರಿ- ರಸ್ತೆಯಲ್ಲೇ ಕೊಟ್ಟಳು ಬಿಸಿ ಬಿಸಿ ಕಜ್ಜಾಯ…!

1 min read
Spread the love

ಗದಗ: ಮಹಿಳೆಯ ಮೊಬೈಲ್ ನ್ನ ಎರಡು ದಿನಗಳ ಹಿಂದೆ ಕದ್ದು ಪರಾರಿಯಾಗಿದ್ದ ಆರೋಪಿ, ಎದುರಿಗೆ ಸಿಕ್ಕಿದ್ದೆ ತಡ ಮಹಿಳೆಯೋರ್ವಳು ರಸ್ತೆಯಲ್ಲಿಯೇ ಹಿಗ್ಗಾ-ಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಗದಗ ವಿಜಯ ಕಲಾ ಮಂದಿರ ಬಳಿ ನಡೆದಿದೆ.

ಎಕ್ಸಕ್ಲೂಸಿವ್ ವೀಡಿಯೋ ಇಲ್ಲಿದೆ ನೋಡಿ..

https://www.facebook.com/100045805057267/videos/2414956811972059/

ಎರಡು ದಿನಗಳ ಹಿಂದೆ ‌ಹೋಟೆಲ್ ಯಜಮಾನಿ ಬಳಿ ಮಾತನಾಡಲು ಮೊಬೈಲ್ ಪಡೆದು ಕಳ್ಳ ಎಸ್ಕೇಪ್ ಆಗಿದ್ದ. ಇಂದು ಮೊಬೈಲ್‌ ಅಂಗಡಿ ಬಳಿ ದಿಢೀರ್ ಕಳ್ಳ ಸಿಕ್ಕಿದ್ದರಿಂದ, ಮಹಿಳೆ ಕಪಾಳಮೋಕ್ಷ ಮಾಡಿದ್ದಾಳೆ.

ಮೊಬೈಲ್ ಕಳ್ಳ ಬೈಕನ್ನ ಕೂಡಾ ಕಳ್ಳತನ ಮಾಡುತ್ತಿದ್ದನೆಂದು ಹೇಳಲಾಗಿದ್ದು, ಮಹಿಳೆಯಿಂದ ಹೊಡೆತ ತಿಂದವನನ್ನ ಪೊಲೀಸರು ಠಾಣೆಗೆ ತೆಗೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ.


Spread the love

Leave a Reply

Your email address will not be published. Required fields are marked *