ನಿಗದಿತ ಸಮಯದಲ್ಲೇ “ಮೊಬೈಲ್ ಕಳ್ಳಾಟ”- ಹಳೇಹುಬ್ಬಳ್ಳಿ ಪೊಲೀಸರು ಹೆಡಮುರಿಗೆ ಕಟ್ಟಿದ್ದು ಯಾರನ್ನ ಗೊತ್ತಾ…!?
1 min readಹುಬ್ಬಳ್ಳಿ: ಕೊರೋನಾ ಲಾಕ್ ಡೌನ್ ದಲ್ಲಿ ನಿಗದಿತ ಸಮಯದಲ್ಲಿ ವ್ಯಾಪಾರ-ವಹಿವಾಟು ಮಾಡಬೇಕೆಂಬ ನಿಯಮ ಮಾಡಿದ್ದನ್ನೇ ಬಂಡವಾಳ ಮಾಡಿಕೊಂಡು ಮೊಬೈಲ್ ಕಳ್ಳತನ ನಡೆಸುತ್ತಿದ್ದ ತಂಡವೊಂದನ್ನ ಪತ್ತೆ ಹಚ್ಚುವಲ್ಲಿ ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಶಿಕಾರಿಪುರ ಹಾಗೂ ತುಮಕೂರಿನಿಂದ ಬಂದಿದ್ದ ಮೊಬೈಲ್ ಕಳ್ಳರು ಹುಬ್ಬಳ್ಳಿಯ ಅಕ್ಷಯ ಪಾರ್ಕ ಪ್ರದೇಶದಲ್ಲಿ ಮನೆ ಮಾಡಿಕೊಂಡು ಸಾರ್ವಜನಿಕರ ಮೊಬೈಲ್ ಗಳನ್ನ ಕಳ್ಳತನ ಮಾಡುತ್ತಿದ್ದರು. ಅವರು ಕದ್ದುಕೊಂಡ ಬಂದ ಮೊಬೈಲ್ ನ್ನ ಚಾಲಾಕಿತನದಿಂದ ಮಾರಾಟ ಮಾಡುತ್ತಿದ್ದರೆಂದು ಗೊತ್ತಾಗಿದೆ.
ಬಂಧಿತರನ್ನ ಶಿಕಾರಿಪುರ ತಾಲೂಕಿನ ಕಳೇನಹಳ್ಳಿ ಗ್ರಾಮದವರಾದ ರವಿ ಬಸವರಾಜ ಭೋವಿ, ರಂಗಪ್ಪ ತಿಮ್ಮಪ್ಪ ಭೋವಿ, ಪಾವಗಡ ತಾಲೂಕಿನ ಕೋಮಾರಹಳ್ಳಿಯ ರಾಘವೇಂದ್ರ ಅಶ್ವತ್ಥ ನಾರಾಯಣ ಹಾಗೂ ಹುಬ್ಬಳ್ಳಿಯ ರಾಮಲಿಂಗೇಶ್ವನಗರದ ಆನಂದ ರುದ್ರಗೌಡ ಪಾಟೀಲ ಎಂಬುವವರನ್ನ ಬಂಧನ ಮಾಡಲಾಗಿದೆ.
ಲಾಕ್ ಡೌನ್ ಸಮಯದಲ್ಲಿ ಸಾರ್ವಜನಿಕರು ಗಡಿಬಿಡಿಯಲ್ಲಿ ವ್ಯಾಪಾರ-ವಹಿವಾಟು ಮಾಡುತ್ತಿರುತ್ತಾರೆ. ಇದೇ ಸಮಯದಲ್ಲಿ ತಮ್ಮ ಕಳ್ಳತನವನ್ನ ಸಲೀಸಾಗಿ ಮುಗಿಸಿ ಬಿಡಬಹುದೆಂದು ಹೊಂಚು ಹಾಕಿ, ಮೂವತ್ತಕ್ಕೂ ಹೆಚ್ಚು ಮೊಬೈಲ್ ಕಳ್ಳತನ ಮಾಡಿದ್ದವರನ್ನ ಕೊನೆಗೂ ಪೊಲೀಸರು ಹೆಡಮುರಿಗೆ ಕಟ್ಟಿದ್ದಾರೆ.
ಹಳೇಹುಬ್ಬಳ್ಳಿ ಠಾಣೆ ಇನ್ಸಪೆಕ್ಟರ್ ಶಿವಾನಂದ ಕಮತಗಿ ನೇತೃತ್ವದಲ್ಲಿ ಕೆ.ಎನ್.ಮೊಟೆಬೆನ್ನೂರ, ಪಿ.ಜಿ.ಪುರಾಣಿಕಮಠ, ಎಂ.ಬಿ.ಪಾಟೀಲ, ವಸಂತ ಗುಡಗೇರಿ, ನಾಗರಾಜ, ಸಿ.ಎಫ್.ಅಂಬಿಗೇರ ಹಾಗೂ ಎಂ.ಬಿ.ಭಜಂತ್ರಿ ಆರೋಪಿಗಳನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.