OLX ನಲ್ಲಿ ಮೊಬೈಲ್ ಮಾರಾಟ ಮಾಡುತ್ತಿದ್ದೀರಾ.. ಹುಷಾರ್, ನಿಮ್ಮನ್ನೇ ಬೆದರಿಸೋ ಕಳ್ಳರಿದ್ದಾರೆ..!
ಹುಬ್ಬಳ್ಳಿ: ಓಎಲ್‌ಎಕ್ಸ್‌ನಲ್ಲಿ ಮೊಬೈಲ್ ಮಾರಾಟದ ಜಾಹೀರಾತು ನೀಡಿದವರನ್ನೇ ಟಾರ್ಗೆಟ್ ಮಾಡಿ, ಮೊಬೈಲ್ ಖರೀದಿ ನೆಪದಲ್ಲಿ ಬೆದರಿಸಿ ಬೆಲೆಬಾಳುವ ಮೊಬೈಲ್ ಎಗರಿಸುತ್ತಿದ್ದ ಇಬ್ಬರನ್ನ ಬಂಧಿಸುವಲ್ಲಿ ನವನಗರದ ಎಪಿಎಂಸಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಲೆಬಾಳುವ ಮೊಬೈಲ್ ಬಗ್ಗೆ ಮಾಲೀಕರು ಜಾಹೀರಾತು ಕೊಟ್ಟಾಗ, ಅದನ್ನ ಗಮನಿಸುತ್ತಿದ್ದ ಈ ಚೋರರು, ಅವರ ಬಳಿ ಹೋಗಿ ಖರೀದಿಸುವ ನಾಟಕವಾಡುತ್ತಿದ್ದರು. ತದನಂತರ ಮೊಬೈಲ್ ಮಾಲೀಕರನ್ನೇ ಬೆದರಿಸಿ ಕಿತ್ತುಕೊಂಡು ಪರಾರಿಯಾಗುತ್ತಿದ್ದರು. ಆರೋಪಿಗಳನ್ನ ಆಕಾಶ ಮುದಲಿಯಾರ್, ಆಕಾಶ ಮುಳೆ ಎಂದು ಗುರುತಿಸಲಾಗಿದೆ. ಬಂಧಿತರಿಂದ ಮೂರುಲಕ್ಷ ಮೌಲ್ಯದ ಮೊಬೈಲ್, ಎರಡು ಬೈಕ್ ವಶಕ್ಕೆ ಪಡೆದಿರುವ ಎಪಿಎಂಸಿ ಠಾಣೆ ಪೊಲೀಸರು ಕಾರ್ಯಾಚರಣೆಯನ್ನ ಮುಂದುವರೆಸಿದ್ದಾರೆ.