ಜಾರ್ಜಿಂಗ್ ಇಟ್ಟಾಗ ಮೊಬೈಲ್ ಸ್ಪೋಟ: ತಾಯಿ-ಎರಡು ಪುಟ್ಟ ಕಂದಮ್ಮಗಳು ಸಾವು
ತಮಿಳುನಾಡು: ರಾತ್ರಿ ಮಲಗುವಾಗ ಸೆಲ್ ಪೋನ್ ಜಾರ್ಜಿಂಗ್ ಇಟ್ಟು ಮಲಗಿದ್ದ ಸಮಯದಲ್ಲೇ ಸ್ಟೋಟಗೊಂಡ ಮೊಬೈಲ್ ನಿಂದ ಮನೆಯಲ್ಲಿ ಸಂಪೂರ್ಣ ಬೆಂಕಿ ತಗುಲಿ ತಾಯಿ ಮತ್ತು ಇಬ್ಬರು ಪುಟ್ಟ ಕಂದಮ್ಮಗಳು ತೀರಿಕೊಂಡ ಘಟನೆ ಕರೂರ ಶಹರದ ರಾಯನೂರ ಪ್ರದೇಶದಲ್ಲಿ ಸಂಭವಿಸಿದೆ.
ಗಂಡನಿಂದ ದೂರವಾಗಿ ಕಿರಾಣಿ ಅಂಗಡಿಯಿಟ್ಟುಕೊಂಡು ತನ್ನ ಇಬ್ಬರು ಮಕ್ಕಳನ್ನಿಟ್ಟುಕೊಂಡು ಜೀವನ ನಡೆಸುತ್ತಿದ್ದ ಮುತ್ತುಲಕ್ಷ್ಮೀ, ರಾತ್ರಿ ಎಂದಿನಂತೆ ಮೊಬೈಲ್ ಜಾರ್ಜಗಿಟ್ಟು ಮಲಗಿದ್ದರು. ಬೆಳಗಿನ ಜಾವ ಮೊಬೈಲ್ ಸ್ಪೋಟಗೊಂಡು ಮನೆತುಂಬ ಹೊಗೆ ತುಂಬಿಕೊಂಡಿದೆ. ನಿದ್ರೆಯ ಮಂಪರಿನಲ್ಲಿದ್ದ ಮೂವರು ಬೆಂಕಿಯ ಕೆನ್ನಾಲೆ ಮತ್ತು ಉಸಿರಾಟದ ತೊಂದರೆಯಿಂದ ಸಾವಿಗೀಡಾಗಿದ್ದಾರೆ.
ಮುತ್ತುಲಕ್ಷ್ಮೀಯನ್ನ ಆಸ್ಪತ್ರೆಗೆ ತೆಗೆದುಕೊಂಡು ಹೋದರು ಯಾವುದೇ ಪ್ರಯೋಜನವಾಗಿಲ್ಲ. ಘಟನಾ ಸ್ಥಳಕ್ಕೆ ತಾಂಡವಡರಮಲೈ ಪೊಲೀಸ್ ಠಾಣೆಯ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣದ ಎಲ್ಲ ಆಯಾಮವನ್ನೂ ತನಿಖೆ ಮಾಡುತ್ತಿರುವ ಪೊಲೀಸರು, ಮುತ್ತುಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡಿದ್ದಾಳಾ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.