ಪಕ್ಷೇತರ ಅಭ್ಯರ್ಥಿ ಗುರಿಕಾರಗೆ ತೀವ್ರ ಹಿನ್ನೆಡೆ- ರಾಷ್ಟ್ರೀಯ ಪಕ್ಷಗಳ ಅಕ್ಕಪಕ್ಕದಲ್ಲಿಯೂ ನಿಲ್ಲದ ಮತಗಳು
ಧಾರವಾಡ: ಪಶ್ಚಿಮ ಪದವೀಧರ ಕ್ಷೇತ್ರದ ಮತ ಎಣಿಕೆಗಳು ಆರಂಭಗೊಂಡಿದ್ದು, ಹಲವು ಪಕ್ಷಗಳ ಬೆಂಬಲ ಪಡೆದಿದ್ದ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ತೀವ್ರ ಹಿನ್ನಡೆ ಅನುಭವಿಸುತ್ತಿದ್ದು, ಮೊದಲ ಪ್ರಾತನಿಧ್ಯ ಮತಗಳಲ್ಲೂ ತೀವ್ರ ಹಿನ್ನಡೆ ಅನುಭವಿಸುತ್ತಿದ್ದಾರೆ.
ಈಗಾಗಲೇ ಕರ್ನಾಟಕ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಮತ ಎಣಿಕೆಯಲ್ಲಿ 14 ಟೇಬಲಗಳನ್ನ ಮಾಡಿದ್ದು, ಈಗಾಗಲೇ 12271 ಮತಗಳ ಎಣಿಕೆ ನಡೆದಿದ್ದು, ಇದರಲ್ಲಿ ಸಾಕಷ್ಟು ಕ್ಯೂರಿಯಾಸಿಟಿ ಹುಟ್ಟಿಸಿದ್ದ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಕೇವಲ 1130 ಮತಗಳನ್ನ ಪಡೆದಿದ್ದಾರೆ.
ಭಾರತೀಯ ಜನತಾ ಪಕ್ಷದ ಎಸ್.ವಿ.ಸಂಕನೂರ 6790 ಮತಗಳನ್ನ ಪಡೆದರೇ, ಕಾಂಗ್ರೆಸ್ ನ ಡಾ.ಕುಬೇರಪ್ಪ 1981 ಮತಗಳನ್ನ ಪಡೆದು, 4809 ಮತಗಳ ಹಿನ್ನೆಡೆ ಅನುಭವಿಸಿದ್ದಾರೆ. ಸೋಜಿಗವೆಂದರೇ, ಮೊದಲ ಸುತ್ತಿನಲ್ಲಿಯೇ 2400 ಮತಗಳು ಕುಲಗೆಟ್ಟಿವೆ.
ಪದವೀಧರ ಕ್ಷೇತ್ರದಲ್ಲಿಯೂ ಮತದಾನ ಮಾಡಿದವರು, ಇಷ್ಟೊಂದು ಪ್ರಮಾಣದಲ್ಲಿ ತಪ್ಪುಗಳು ಮಾಡಿರುವುದು ಅಚ್ಚರಿ ಮೂಡಿಸಿದ್ದು, ಇನ್ನುಳಿದ ರೌಂಡಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.