‘ಪದವೀಧರ’-‘ಶಿಕ್ಷಕ’ ಕ್ಷೇತ್ರಕ್ಕೆ ಚುನಾವಣೆ ನಿಗದಿ: 28ಕ್ಕೆ ಮತದಾನ- ನವೆಂಬರ್ 2ಕ್ಕೆ ಮತ ಎಣಿಕೆ
1 min readನವದೆಹಲಿ: ರಾಜ್ಯದ ವಿಧಾನಪರಿಷತ್ ಚುನಾವಣೆಯನ್ನ ನಡೆಸಲು ಚುನಾವಣೆ ಆಯೋಗ ಮುಂದಾಗಿದ್ದು, ನಾಲ್ಕು ಕ್ಷೇತ್ರಗಳಿಗೆ ದಿನಾಂಕವನ್ನ ನಿಗದಿ ಮಾಡಿ ಆದೇಶ ಹೊರಡಿಸಿದೆ.
ಎರಡು ಪದವೀಧರ ಕ್ಷೇತ್ರ ಮತ್ತೂ ಎರಡು ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯಲಿದೆ. ಕರ್ನಾಟಕ ಸೌತ್ ಈಸ್ಟ್ ಪದವೀಧರ ಕ್ಷೇತ್ರ, ಕರ್ನಾಟಕ ವೆಸ್ಟ್ ಪದವೀಧರ ಕ್ಷೇತ್ರ, ಕರ್ನಾಟಕ ನಾರ್ಥ ಈಸ್ಟ್ ಟೀಚರ್ಸ್ ಕ್ಷೇತ್ರ ಹಾಗೂ ಬೆಂಗಳೂರು ಟೀಚರ್ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ.
ಈ ಹಿಂದೆಯಿದ್ದ ಆರ್.ಚೌಡರೆಡ್ಡಿ, ಎಸ್.ವಿ.ಸಂಕನೂರ, ಶರಣಪ್ಪ ಮತ್ತೂರ ಹಾಗೂ ಪುಟ್ಟಣ್ಣರ ಅವಧಿ ಜೂನ್ 30ಕ್ಕೆ ಕೊನೆಯಾಗಿದ್ದು, ಕೊರೋನಾ ಹಿನ್ನೆಲೆಯಲ್ಲಿ ಚುನಾವಣೆ ನಾಲ್ಕು ತಿಂಗಳು ವಿಳಂವಾಗಿ ನಡೆಯುತ್ತಿದೆ.
ಅಕ್ಟೋಬರ್ 1ರಿಂದ ನೋಟಿಫಿಕೇಶನ್ ಹೊರಡಿಸಲಿದ್ದು, ಅಕ್ಟೋಬರ್ 8 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಕ್ಟೋಬರ್ 28ರಂದು ಮತದಾನ ನಡೆಯಲಿದ್ದು, ನವೆಂಬರ್ 2ರಂದು ಮತ ಎಣಿಕೆ ನಡೆಯಲಿದೆ ಎಂದು ಮಾಹಿತಿ ನೀಡಲಾಗಿದೆ.