ಸಂಕನೂರ ಗೆಲುವು ಫಿಕ್ಸ್- ಕುಬೇರಪ್ಪ, ಗುರಿಕಾರ ಸೋಲು ನಿಶ್ಚಿತ
3ನೇ ಸುತ್ತಿನಲ್ಲೂ ಬಿಜೆಪಿ ಅಭ್ಯರ್ಥಿ ಮುನ್ನಡೆ
ಧಾರವಾಡ : ಪಶ್ಚಿಮ ಪದವೀಧರ ಕ್ಷೇತ್ರದ ಮತ ಎಣಿಕೆ 3ನೆ ಸುತ್ತು ಮುಗಿದಿದ್ದು ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ 19565 ಮತಗಳನ್ನು ಪಡೆದು ಮುನ್ನಡೆ ಕಾಯ್ದುಕೊಂಡಿದ್ದಾರೆ.
ಮೂರನೇ ಸುತ್ತು ಪೂರ್ಣಗೊಂಡ ನಂತರ 41998 ಮತಗಳ ಎಣಿಕೆ ಮುಗಿದಿದೆ.
ಕಾಂಗ್ರಸ್ ನ ಆರ್.ಎಂ. ಕುಬೇರಪ್ಪ 9449 ಹಾಗೂ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ 5284 ಮತ ಪಡೆದಿದ್ದಾರೆ. 7045 ಮತಗಳು ತಿರಸ್ಕೃತಗೊಂಡಿವೆ.
ನಾಲ್ಕನೇ ಸುತ್ತಿನ ಮತ ಎಣಿಕೆ ನಡೆದಿದ್ದು, ಬಿಜೆಪಿಯ ಸಂಕನೂರ ಗೆಲುವು ಖಚಿತ.
ಚಲಾವಣೆಯಾದ ಮತಗಳು 52068
ಈವರೆಗೆ ಎಣಿಕೆಯಾಗಿದ್ದು 41998
ಕುಲಗೆಟ್ಟ ಮತಗಳು 7045