ಸದನದಲ್ಲಿ ಗುಡುಗಿದ ಶಾಸಕ ವಿನಯ ಕುಲಕರ್ಣಿ..

ಬೆಂಗಳೂರು: ಹಲವು ವರ್ಷಗಳ ನಂತರ ಧಾರವಾಡ ಗ್ರಾಮೀಣ ಭಾಗದ ಶಾಸಕ ವಿನಯ ಕುಲಕರ್ಣಿ ವಿಧಾನಸಭೆಯಲ್ಲಿ ಗುಡುಗಿದ್ದು, ಬಿಜೆಪಿ ಶಾಸಕರಿದ್ದ ಸಮಯದಲ್ಲಿ ಆಗಿರುವ ಪ್ರಮಾದದ ಬಗ್ಗೆ ತನಿಖೆ ಮಾಡುವಂತೆ ಕೋರಿದ್ದಾರೆ.
ಕಳೆದ ಬಾರಿ ಅತಿವೃಷ್ಠಿಯಿಂದ ಹಲವರು ಮನೆಗಳನ್ನ ಕಳೆದುಕೊಂಡರೂ ಅವರಿಗೆ ಪರಿಹಾರ ಸಿಕ್ಕಿಲ್ಲ. ಕೆಲವರಿಗೆ ಜಾಗವೇ ಇಲ್ಲ. ಹೀಗಾಗಿ ಪರಿಹಾರ ನೀಡಿಕೆಯಲ್ಲಿ ಅನ್ಯಾಯವಾಗಿದೆ. ಆಗಿರುವ ಬಗ್ಗೆ ತನಿಖೆ ನಡೆಸುವಂತೆ ಕೇಳಿಕೊಂಡರು.
ವೀಡಿಯೋ ಇಲ್ಲಿದೆ ನೋಡಿ..
ಕಳೆದ ಬಾರಿ ಮನೆ ಬಿದ್ದರೂ ಪರಿಹಾರ ನೀಡಿಲ್ಲವೆಂದು ನೂರಾರು ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನೇಲ್ಲ ಗಮನದಲ್ಲಿಟ್ಟುಕೊಂಡು ಶಾಸಕ ವಿನಯ ಕುಲಕರ್ಣಿ ಸದನದಲ್ಲಿ ಧ್ವನಿಯತ್ತಿ ತನಿಖೆ ಆಗುವಂತೆ ನೋಡಿಕೊಳ್ಳುತ್ತಿದ್ದಾರೆ.