ಪಂಚಮಸಾಲಿ ಮೀಸಲಾತಿ: ಮಹತ್ವದ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದ ಶಾಸಕ ವಿನಯ ಕುಲಕರ್ಣಿ…!!!
1 min readಬೆಳಗಾವಿ: ಪಂಚಮಸಾಲಿ ಮೀಸಲಾತಿಗಾಗಿ ಇದೇ ತಿಂಗಳ 21ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬೆಂಗಳೂರಿನಲ್ಲಿ ಸರ್ವಪಕ್ಷದ ಶಾಸಕರ ಸಭೆಯನ್ನು ಕರೆದಿದ್ದಾರೆಂದು ಶಾಸಕ ವಿನಯ ಕುಲಕರ್ಣಿ ಹೇಳಿದರು.
ಚಳಿಗಾಲದ ಅಧಿವೇಶನದ ವೇಳೆಯಲ್ಲಿ ಮಾತನಾಡಿದ ಶಾಸಕ ವಿನಯ ಕುಲಕರ್ಣಿ ಅವರು, ಮೊನ್ನೆ ನಡೆದ ಘಟನೆಯ ಬಗ್ಗೆ ಸಮಾಜದವರು ನೊಂದುಕೊಳ್ಳುವ ಅವಶ್ಯಕತೆ ಇಲ್ಲ ಎಂದರು.
ವೀಡಿಯೋ…
ನಾನು ಹೋರಾಟದಲ್ಲಿ ಭಾಗಿಯಾಗಲು ಆಗದೇ ಇರುವುದಕ್ಕೆ ಕಾರಣವಿದೆ. ಸಮಾಜದಲ್ಲಿನ ಬಡವರಿಗಾಗಿ ಮೀಸಲಾತಿಯ ಅವಶ್ಯಕತೆಯಿದೆ. ಅಲ್ಪಸಂಖ್ಯಾತರ ಮೀಸಲಾತಿ ತೆಗೆದು ನಮಗೆ ಕೊಡುವುದು ಬೇಡ ಎಂದರು.