ಸುಧಾಕರ್ ನಿಮಗೆ ಮಾನ, ಮರ್ಯಾದೆ, ನಾಚಿಕೆ ಇದೇಯಾ: ಶಾಸಕ ಪ್ರದೀಪ ಈಶ್ವರ ಟಾಂಗ್..

- ನೆನ್ನೆ ಮಾಜಿ ಸಚಿವ ಡಾ .ಕೆ. ಸುಧಾಕರ್ ಪ್ರದೀಪ್ ಈಶ್ವರ್ ವಿರುದ್ದ ಹೇಳಿಕೆ ಹಿನ್ನೆಲೆ
ಮಾಜಿ ಸಚಿವ ಡಾ. ಕೆ.ಸುಧಾಕರ್ ಗೆ ಟಕ್ಕರ್ ಕೊಟ್ಟ ಪ್ರದೀಪ್ ಈಶ್ವರ್
ಚಿಕ್ಕಬಳ್ಳಾಪುರ: ನಮ್ಮ ಹುಡುಗರು ದಾಳಿ ಹಲ್ಲೆ ಮಾಡಿದ್ದಾರೆ ಅಂತ ಹೇಳಿದ್ದೀರಾ. ಸುಧಾಕರ್ ನಿಮಗೆ ತಾಖತ್ ಇದ್ದರೆ ಪ್ರೂಫ್ ತೋರಿಸು. ಆ ಹುಡುಗ ನಿನ್ನ ವಿರುದ್ದ ಮಾತನಾಡಿದ ಅಂತ ಜೈಲಿಗೆ ಕಳಿಸಿದ್ರಿ. ಈಗ ಅದೇ ಹುಡುಗನನ್ನ ಇಟ್ಟುಕೊಂಡು ಧರಣಿ ಮಾಡ್ತಿದ್ದೀರಿ ಎಂದು ಶಾಸಕ ಪ್ರದೀಪ ಈಶ್ವರ ಟಾಂಗ್ ನೀಡಿದ್ರು.
ಯುವಕನಿಗೆ ದೈಹಿಕ ಹಾಗೂ ಮಾನಸಿಕ ಹಲ್ಲೆ ಆಗಿತ್ತು ಅಂತೀರಲ್ಲಾ. ಸುಧಾಕರ್ ನಿಮಗೆ ನಾಚಿಕೆ, ಮಾನ, ಮರ್ಯಾದೆ ಏನಾದರೂ ಇದ್ಯಾ. ದೈಹಿಕ ಹಲ್ಲೆ ಆಗಿರೋದನ್ನ ತೋರಿಸಲಿ ನೋಡೋಣ. ಚಿಕ್ಕಬಳ್ಳಾಪುರದಲ್ಲಿ ಯಾರು ಗೂಂಡಾ ರಾಜಕೀಯ ಮಾಡಿದ್ದು..? ಎಂದು ಪ್ರಶ್ನಿಸಿದರು.
ನನ್ನ ಅವಧಿಯಲ್ಲಿ ಯಾವಾನಾದ್ರೂ ಬಾಲ ಬಿಚ್ಚಲಿ ನೋಡೋಣ, ಅಧಿಕಾರದಲ್ಲಿ ಇಲ್ಲದೇ ಇದ್ದಾಗಲೇ ನಾನು ಯಾರ ಮಾತೂ ಕೇಳಲಿಲ್ಲ ಸುಧಾಕರ್ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.