ಶಾಸಕ ನಿಂಬಣ್ಣನವರೇ, ನೀವೂ ಏನು ಮಾಡ್ತಿದ್ದೀರಿ: ತಮ್ಮನ ಮಕ್ಕಳ ವಿರುದ್ಧವೇ ಶಾಸಕರ ಷಢ್ಯಂತ್ರ..!
1 min readಧಾರವಾಡ: ನಾವೂ ಯಾರದೇ ಕಾರಿಗೆ ಕಲ್ಲು ಹೊಡೆದಿಲ್ಲ. ಸುಖಾಸುಮ್ಮನೆ ಪೊಲೀಸರನ್ನ ಬಳಕೆ ಮಾಡಿಕೊಂಡು ನಮ್ಮ ವಿರುದ್ಧ ಪ್ರಕರಣ ದಾಖಲು ಮಾಡುವಲ್ಲಿ ಶಾಸಕ ಸಿ.ಎಂ.ನಿಂಬಣ್ಣನವರ ಎನಿಸಿಕೊಂಡಿರುವ ನಮ್ಮ ಸಂಬಂಧಿಯೇ ಕುತಂತ್ರ ಮಾಡಿದ್ದಾರೆಂದು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದ ಸಂಗೇದೇವರಕೊಪ್ಪದ ಸಂಗಮೇಶ ನಿಂಬಣ್ಣನವರ ತಿಳಿಸಿದ್ದಾರೆ.
ಜನೇವರಿ 3ರಂದು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲು ಮಾಡಿದ್ದಾರೆ. ಸಂಗೇದೇವರಕೊಪ್ಪದಲ್ಲಿ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮೂರು ಸ್ಥಾನಗಳು ಬಿಜೆಪಿ ಬೆಂಬಲಿತರು ಕಳೆದುಕೊಂಡಿದ್ದಾರೆ. ಅದೇ ಕಾರಣಕ್ಕೆ ನಮ್ಮ ಮೇಲೆ ಸೇಡು ತೀರಿಸುವಕೊಳ್ಳುವುದಕ್ಕೆ ಇಂತಹ ಪ್ರಕರಣ ದಾಖಲು ಮಾಡಿದ್ದಾರೆ ಅಂತಾರೆ ಸಂಗಮೇಶ ನಿಂಬಣ್ಣನವರ.
ಚುನಾವಣೆಯ ದಿನವೇ ಶಾಸಕರ ಮಗ ಶಶಿಧರ, ಮತದಾರರಿಗೆ ಧಮಕಿ ಹಾಕುತ್ತಿದ್ದ. ಅಷ್ಟೇ ಅಲ್ಲ, ಗ್ರಾಮಸ್ಥರ ವಿರುದ್ಧವೇ ಮಾತನಾಡಿದ ಪರಿಣಾಮ, ಮೂರುಸ್ಥಾನಗಳನ್ನ ಕಳೆದುಕೊಂಡರು. ಅದನ್ನ ನಮ್ಮ ಮೇಲೆ ಕೇಸ್ ಹಾಕುವ ಮೂಲಕ ಸೇಡಿಗೆ ನಿಂತಿದ್ದಾರೆನ್ನುತ್ತಾರೆ ಸಂಗಮೇಶ ಅವರು.
ಕಲಘಟಗಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ನಾವೂ ಜಾಮೀನು ಪಡೆದುಕೊಂಡಿದ್ದೇವೆ. ಆದರೆ, ಇದರಲ್ಲಿ ರಾಜಕೀಯ ಅಡಗಿದೆ. ನಾವೂ ಸುಮ್ಮನೆ ಕೂಡುವುದಿಲ್ಲ. ನನ್ನ ಕೊಲೆ ಬೆದರಿಕೆ ಕೂಡಾ ಒಡ್ಡಿದ್ದಾರೆ ಎಂದು ಆತಂಕವನ್ನ ಹೊರ ಹಾಕಿದ್ದಾರೆ ಸಂಗಮೇಶ ನಿಂಬಣ್ಣನವರ.
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಶಾಸಕ ನಿಂಬಣ್ಣನವರ ಸ್ವಂತೂರಲ್ಲಿ ಸೋತು, ದಾಯಾದಿಗಳ ವಿರುದ್ಧವೇ ಅಸಹ್ಯತನಕ್ಕೆ ನಿಂತರಾ ಎಂಬ ಪ್ರಶ್ನೆ ಮೂಡಿದ್ದು, ಸಂಗಮೇಶ ನಿಂಬಣ್ಣನವರ ಮತ್ಯಾವ ರೀತಿಯಲ್ಲಿ ಹೋರಾಟಕ್ಕೆ ಇಳಿಯುತ್ತಾರೋ ಎಂಬುದನ್ನ ಕಾದು ನೋಡಬೇಕಿದೆ.