ಕೋಳಿವಾಡ ಬೆಂಕಿ ಅವಘಡ- ಇಬ್ಬರಿಗೆ ಗಾಯ: ಶಾಸಕ ಶಂಕರ ಪಾಟೀಲಮುನೇನಕೊಪ್ಪ ಭೇಟಿ, ಸಾಂತ್ವನ…!

ಹುಬ್ಬಳ್ಳಿ: ತಾಲೂಕಿನ ಕೋಳಿವಾಡ ಗ್ರಾಮದಲ್ಲಿ ನಡೆದ ಬೆಂಕಿಯ ಅವಘಡದಲ್ಲಿ ಇಬ್ಬರಿಗೆ ತೀವ್ರವಾದ ಗಾಯಗಳಾಗಿದ್ದು, ಅವರನ್ನ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಕೋಳಿವಾಡ ಗ್ರಾಮದ ಪ್ರಮುಖ ಸ್ಥಳದಲ್ಲಿ ಇರುವ ಅಂಗಡಿ ಹಾಗೂ ಮನೆಗೆ ಬೆಂಕಿ ತಗುಲಿದ್ದರಿಂದ ಪೂರ್ಣವಾಗಿ ಕಿರಾಣಿ ವಸ್ತುಗಳು ಸುಟ್ಟು ಕರಕಲಾಗಿವೆ. ಘಟನೆಯಲ್ಲಿ ಬಸವಣ್ಣೆಪ್ಪ ಜಂತ್ಲಿ ಹಾಗೂ ನೀಲಮ್ಮ ಜಂತ್ಲಿ ಎನ್ನುವವರಿಗೆ ಗಾಯಗಳಾಗಿವೆ. ಬೆಂಕಿಯ ತೀವ್ರವಾದ ಶಾಖ ತಗುಲಿದ ಪರಿಣಾಮ ಕಾಲಿಗೆ ಗುಳ್ಳೆಗಳಾಗಿವೆ.

ಕೋಳಿವಾಡ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಅವರು, ಸುಟ್ಟು ಕರಕಲಾದ ಅಂಗಡಿ ಹಾಗೂ ಮನೆಯನ್ನ ವೀಕ್ಷಣೆ ಮಾಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳನ್ನ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ಘಟನೆಯ ಬಗ್ಗೆ ಮಾಹಿತಿಯನ್ನ ಪಡೆದ ಶಾಸಕ ಶಂಕರ ಪಾಟೀಲಮುನೇನಕೊಪ್ಪ, ವೈದ್ಯರಿಗೆ ಸೂಚನೆ ನೀಡಿ, ಅವಶ್ಯಕವಿರುವ ಚಿಕಿತ್ಸೆಯನ್ನ ಮುಂದುವರೆಸಿ ಎಂದರು. ಪ್ರಮುಖರಾದ ರಾಜು ಕಂಪ್ಲಿ, ಗಂಗಣ್ಣ ಗಾಣಿಗೇರ, ಬಸಣ್ಣ ಸೊರಟೂರ, ರುದ್ರಪ್ಪ ಕಗ್ಗಣ್ಣನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.