ನವಲಗುಂದ-ಅಣ್ಣಿಗೇರಿಗೆ ಮೂರು ಅಂಬ್ಯುಲೆನ್ಸ್: ಶಾಸಕ ಶಂಕರ ಪಾಟೀಲಮುನೇನಕೊಪ್ಪ ಚಾಲನೆ…!

ನವಲಗುಂದ/ಅಣ್ಣಿಗೇರಿ: ಕೊರೋನಾ ಸಾಂಕ್ರಾಮಿಕ ರೋಗವನ್ನ ತಡೆಗಟ್ಟಲು ನವಲಗುಂದ ಕ್ಷೇತ್ರದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಕ್ಷೇತ್ರದ ಜನರಿಗಾಗಿ ಇಂದು ಮತ್ತೆ ಮೂರು ಅಂಬ್ಯುಲೆನ್ಸ್ ಗೆ ಚಾಲನೆ ನೀಡಲಾಯಿತು.

ದೇಶಪಾಂಡೆ ಪೌಂಡೇಶನ್ ಮೂಲಕ ಇಂದು ನವಲಗುಂದಕ್ಕೆ ಒಂದು, ಅಣ್ಣಿಗೇರಿಗೆ ಎರಡು ಅಂಬ್ಯುಲೆನ್ಸ್ ಗಳನ್ನ ನೀಡಲಾಯಿತು. ಇವುಗಳಿಗೆ ಇಂದು ಶಾಸಕ ಶಂಕರ ಪಾಟೀಲಮುನೇನಕೊಪ್ಪ ಚಾಲನೆ ನೀಡಿದರು.

ಸಾರ್ವಜನಿಕರಿಗೆ ಯಾವುದೇ ಥರದಲ್ಲಿ ತೊಂದರೆ ಆಗಬಾರದೆಂಬ ಉದ್ದೇಶದಿಂದ ಹಲವರು, ಶಾಸಕರಿಗೆ ಸಾಥ್ ನೀಡುತ್ತಿದ್ದಾರೆ. ತಮ್ಮ ಕ್ಷೇತ್ರದ ಜನರಿಗೆ ಅನುಕೂಲವಾಗುವ ಎಲ್ಲ ದೃಷ್ಟಿಕೋನವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ.