Mla ಎಂ.ಆರ್.ಪಾಟೀಲ ಅವರ ಆಪ್ತ ಸಹಾಯಕ “ಕಿರಣ ಅರಮನೆ” ರಾಜ್ಯಮಟ್ಟದ ಕವಿಗೋಷ್ಠಿಗೆ ಆಯ್ಕೆ…

ಹುಬ್ಬಳ್ಳಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡೆಮಿಯು ಆಯೋಜಿಸಿದ್ದ ರಾಜ್ಯಮಟ್ಟದ ಯುವ ಕವಿಗೋಷ್ಠಿಗೆ ಕುಂದಗೋಳದ ಶಾಸಕ ಎಂ.ಆರ್.ಪಾಟೀಲ ಅವರ ಆಪ್ತ ಕಾರ್ಯದರ್ಶಿ ಕಿರಣ ಅರಮನೆ ಆಯ್ಕೆಯಾಗಿದ್ದಾರೆ.
ಜುಲೈ 21 ರಂದು ಬೆಳಗಾವಿಯ ಕನ್ನಡ ಭವನದಲ್ಲಿ ನಡೆಯಲಿರುವ ರಾಜ್ಯಮಟ್ಟದ ಯುವ ಕವಿಗೋಷ್ಠಿಯಲ್ಲಿ ಕಿರಣ ಅರಮನೆ ಭಾಗವಹಿಸಲಿದ್ದಾರೆ.
ಕಂದಾಯ ಇಲಾಖೆಯಲ್ಲಿ ಸೇವೆಯಲ್ಲಿರುವ ಕಿರಣ ಅವರು, ಶಾಸಕರ ಆಪ್ತ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಿರಣ ಅರಮನೆ ಅವರು ಮಾನವೀಯತೆ ನೆಲೆಗಟ್ಟಿನಲ್ಲಿ ಜೀವನ ನಡೆಸುತ್ತಿದ್ದು, ಬಹುತೇಕರೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿದ್ದಾರೆ.
ಕಿರಣ ಅರಮನೆ ಅವರಲ್ಲಿ ಮೊದಲಿಂದಲೂ ಕವಿ ಮನಸ್ಸು ಹೊಂದಿದ್ದು, ಈ ಆಯ್ಕೆಗೆ ಕಾರಣವಾಗಿದೆ. ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರ ಜೊತೆಯೂ ಕಿರಣ ಅರಮನೆ ಆಪ್ತ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.