ಕೊರೋನಾ ವಾರಿಯರ್ಸ್ ಗೆ ಅಪತ್ಪಾಂಧವರಾದ ಶಾಸಕ ಅಮೃತ ದೇಸಾಯಿ…!
1 min readಧಾರವಾಡ: ಕೊರೋನಾ ಸಮಯದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸಿದ ಕ್ಷೇತ್ರದ ಪ್ರತಿಯೊಬ್ಬ ವಾರಿಯರ್ಸ್ ಗೂ ಗೌರವ ಸೂಚಿಸಲು ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಮುಂದಾಗಿದ್ದಾರೆ. ಹಾಗಾಗಿಯೇ, ಪ್ರತಿಯೊಬ್ಬರಿಗೂ 2 ಸಾವಿರ ರೂಪಾಯಿಗಳ ನಗದನ್ನ ನೀಡಲು ಸನ್ನದ್ಧರಾಗಿದ್ದಾರೆ.
ಕೊರೋನಾ ಸಾಂಕ್ರಾಮಿಕ ರೋಗದಿಂದ ಹಲವರು ಭಯದಿಂದ ನರಳುತ್ತಿದ್ದಾಗಲೂ ಸದಾಕಾಲ ಧೈರ್ಯದಿಂದ ಕಾರ್ಯನಿರ್ವಹಿಸಿದ್ದು ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಹಾಗೂ ಪಂಚಾಯತ್ ಸಿಬ್ಬಂದಿಗಳು. ಕ್ಷೇತ್ರದಲ್ಲಿರುವ ಸುಮಾರು 800 ಕೊರೋನಾ ವಾರಿಯರ್ ಗಳಿಗೆ ಶಾಸಕರು 2 ಸಾವಿರ ರೂಪಾಯಿ ಕೊಡಲು ಮುಂದಾಗಿದ್ದಾರೆ.
ಕ್ಷೇತ್ರದ ಜನರ ಆರೋಗ್ಯವನ್ನ ಕಾಪಾಡಲು ಮುಂದಾದವರಿಗೆ ತಮ್ಮದೇ ರೀತಿಯಲ್ಲಿ ಶಾಸಕ ಅಮೃತ ದೇಸಾಯಿ ಅವರು ಸಹಾಯ ಮಾಡಲು ಮುಂದಾಗಿದ್ದು, ರಾಜ್ಯದಲ್ಲಿಯೇ ಮೊದಲು ಎಂದು ಹೇಳಲಾಗುತ್ತಿದೆ.
ಇಂದು ಈ ಮಹತ್ತರವಾದ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಯಿತು. ಶಾಸಕ ಅಮೃತ ದೇಸಾಯಿ ಗೆಳೆಯರ ಬಳಗದಿಂದ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ಸ್ವತಃ ಶಾಸಕ ಅಮೃತ ದೇಸಾಯಿ ಭಾಗವಹಿಸಿ, ಗರಗ ಹಾಗೂ ಕೋಟೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊರೋನಾ ವಾರಿಯರ್ ಗಳಿಗೆ ತಲಾ 2 ಸಾವಿರ ರೂಪಾಯಿ ಹಾಗೂ ಪ್ರಶಂಸನಾ ಪತ್ರ ನೀಡಿ ಗೌರವಿಸಿದರು.
ತಹಶೀಲ್ದಾರ ಸಂತೋಷ ಬಿರಾದರ್, ತಾಲೂಕ ಅಧ್ಯಕ್ಷ ರುದ್ರಪ್ಪ ಅರಿವಾಳ, ಕೆಡಿಪಿ ಸದ್ಯಸ್ಯ ನಾಗನಗೌಡ ಪಾಟೀಲ, ಮಹೇಶ್ ಯಲಿಗಾರ ಸೇರಿದಂತೆ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು ಉಪಸ್ಥಿತರಿದ್ದರು.