ಅಧಿವೇಶನ ಮುಗಿವರೆಗೂ “ಅರವಿಂದ ಬೆಲ್ಲದ” ಸೇರಿ ಹತ್ತು MLA ‘ಹೊರಕ್ಕೆ’…

ಬೆಂಗಳೂರು: ವಿಧಾನಸಭೆಯಲ್ಲಿ ಹೈಡ್ರಾಮಾ ನಡೆದಿದ್ದು ಭಾರತೀಯ ಜನತಾ ಪಕ್ಷದ ಹತ್ತು ಶಾಸಕರನ್ನ ಈ ಅಧಿವೇಶನ ಮುಗಿಯುವವರೆಗೂ ಅಮಾನತ್ತನ್ನ ಸ್ಪೀಕರ್ ಯು.ಟಿ.ಖಾದರ್ ಮಾಡಿದ್ದಾರೆ.
ಅಧಿವೇಶನದ ವೇಳೆಯಲ್ಲಿ ಚರ್ಚೆ ತೀವ್ರಗೊಂಡ ಸಮಯದಲ್ಲಿ ಸದನದ ಬಾವಿಯೊಳಗೆ ಇಳಿದ ಬಿಜೆಪಿ ಶಾಸಕರು, ಹಾಳೆಗಳನ್ನ ಎಸೆಯತೊಡಗಿದರು. ಇದರಿಂದ ಸಾಕಷ್ಟು ಉಂಟಾಗಿತ್ತು. ಹಾಗಾಗಿ, ಅವರನ್ನ ಹೊರಗೆ ಹಾಕುವಂತೆ ಕಾಂಗ್ರೆಸ್ ಶಾಸಕರು ಆಗ್ರಹಿಸಿದ್ದರು.
ಇದಾದ ನಂತರ ಸಿ.ಎಸ್.ಅಶ್ವಥ್ ನಾರಾಯಣ, ಆರ್.ಅಶೋಕ, ಬಸನಗೌಡ ಪಾಟೀಲ ಯತ್ನಾಳ, ಅರಗ ಜ್ಞಾನೇಂದ್ರ, ಅರವಿಂದ ಬೆಲ್ಲದ, ವೇದವ್ಯಾಸ ಕಾಮತ, ಯಶಪಾಲ್ ಸುವರ್ಣ, ಧೀರಜ ಮುನಿರಾಜು, ಉಮನಾಥ ಕೋಟ್ಯಾನ, ವೈ ಭರತಶೆಟ್ಟಿ ಅವರನ್ನ ಅಮಾನತ್ತು ಮಾಡಲಾಗಿದೆ.