ರಾಜ್ಯವೇ “ಇಷ್ಟ್ ಪಡುವ” ನಿರ್ಧಾರ ಮಾಡಿದ ಶಾಸಕ ಅಮೃತ ದೇಸಾಯಿ ಕುಟುಂಬ..

ಧಾರವಾಡ: ಭಾರತೀಯ ಜನತಾ ಪಕ್ಷದ ಧಾರವಾಡ 71 ಕ್ಷೇತ್ರದ ಶಾಸಕ ಅಮೃತ ದೇಸಾಯಿ ಕುಟುಂಬ ಹೊಸದೊಂದು ನಿರ್ಧಾರಕ್ಕೆ ಬಂದಿದ್ದು, ಇಡೀ ರಾಜ್ಯವೇ ಇಷ್ಟಪಡುವುದಾಗಿದೆ.
ಹೌದು.. ಶಾಸಕ ಅಮೃತ ದೇಸಾಯಿ ಹೊಸದೊಂದು ಭಾಷ್ಯ ಬರೆಯಲು ಮುಂದಾಗಿದ್ದಾರೆ. ತಮ್ಮ ಹುಟ್ಟುಹಬ್ಬದ ಅಂಗವಾಗಿ ತಮ್ಮ ಮಡದಿಯ ಜೊತೆಗೂಡಿ ಕಣ್ಣನ್ನ ದಾನ ಮಾಡಲು ಮುಂದಾಗಿದ್ದಾರೆ.
ಧಾರವಾಡದಲ್ಲಿ ನಾಳೆ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಘೋಷಣೆ ಮಾಡಲಿದ್ದಾರೆ. ಇದರ ಜೊತೆಗೆ ಕ್ಷೇತ್ರದ ಜನರ ಆರೋಗ್ಯದ ಹಿತದೃಷ್ಟಿಯಿಂದ ವಿನೂತನ ಯೋಜನೆಯನ್ನು ರೂಪಿಸಿದ್ದಾರೆ.
ಖ್ಯಾತ ಚಿತ್ರನಟ ಪುನೀತ ರಾಜಕುಮಾರ ಅಗಲಿಕೆಯನ್ನ ಇಂತಹ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಸ್ಮರಣೆ ಮಾಡಲು ಮುಂದಾಗಿದ್ದಾರೆ.