‘SPM’ ಐತಿಹಾಸಿಕ ಶಿಕ್ಷಣ ಕ್ರಾಂತಿ: ಮೊದಲ ಬಾರಿಗೆ ಗುದ್ದಲಿ ಹಿಡಿದ ಶಾಸಕ- ಬೆಣ್ಣೆಹಳ್ಳದ ತಟದಲ್ಲಿ ಅಕ್ಷರದ ಹೊಳೆ
ಹುಬ್ಬಳ್ಳಿ: ಇದು ರಾಜ್ಯದಲ್ಲಿಯೇ ಇತಿಹಾಸ ಸೃಷ್ಟಿಸಿದ ಕಾರ್ಯಕ್ರಮ. ರಾಜ್ಯದ ಯಾವುದೇ ಭಾಗದಲ್ಲಿ ಒಂದೇ ಬಾರಿಗೆ ಇಷ್ಟೊಂದು ಶಾಲೆಯ ಕೊಠಡಿಗಳನ್ನ ನಿರ್ಮಾಣ ಮಾಡುತ್ತಿರುವುದು ಮೈಲಿಗಲ್ಲು ಸೃಷ್ಟಿಸಿದೆ. ಅದಕ್ಕೆ ಕಾರಣವಾಗಿದ್ದು ನವಲಗುಂದ ಕ್ಷೇತ್ರದ ಶಾಸಕ ಶಂಕರ ಪಾಟೀಲಮುನೇನಕೊಪ್ಪ.
ಹೌದು.. ಇಂದು ವಿಶೇಷ ದಿನ. ನವಲಗುಂದ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಸರಕಾರಿ ಶಾಲೆಗಳಿಗೆ ಇಂದಿನಿಂದ ಶುಕ್ರದೆಸೆ ಆರಂಭವಾಗಿದೆ. ಬರೋಬ್ಬರಿ 201 ಸರಕಾರಿ ಕೊಠಡಿಗಳ ನಿರ್ಮಾಣಕ್ಕೆ ಇಂದು ಚಾಲನೆ ಕೊಡಲಾಯಿತು.
ಇಂತಹ ಅಭೂತಪೂರ್ವ ಕಾರ್ಯಕ್ರಮವನ್ನ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನಾಚರಣೆಯ ದಿನವೇ ಮಾಡಬೇಕೆಂದು ಸಂಕಲ್ಪ ಹೊಂದಿದ್ದ ಶಾಸಕ ಶಂಕರ ಪಾಟೀಲಮುನೇನಕೊಪ್ಪ, ಅದಕ್ಕೆ ಆಯ್ದುಕೊಂಡಿದ್ದು ಮುರುಘಾಮಠದ ಮಹಾಂತಪ್ಪಗಳ ಜನ್ಮಸ್ಥಳವಾದ ಇಂಗಳಳ್ಳಿಯನ್ನ.
ಇಂದು ಸಚಿವ ಜಗದೀಶ ಶೆಟ್ಟರ ಸೇರಿದಂತೆ ಹಲವರು ಈ ಕಾರ್ಯಕ್ರಮಮದಲ್ಲಿ ಭಾಗವಹಿಸಿ, ಶಂಕರ ಪಾಟೀಲಮುನೇನಕೊಪ್ಪರ ಶಿಕ್ಷಣ ಪ್ರೇಮವನ್ನ ಸ್ಮರಿಸಿದರು. ಒಂದ ಕ್ಷೇತ್ರದಲ್ಲಿ 201 ಕೊಠಡಿಗಳನ್ನ ನಿರ್ಮಾಣ ಮಾಡುತ್ತಿರುವುದು ಐತಿಹಾಸಿಕ ದಿನವೆಂದರು.
ಯಾವುದೇ ಕಾರ್ಯಕ್ರಮ ನಡೆದರೂ ಎಂದೂ ಗುದ್ದಲಿ ಹಿಡಿದು ಪೂಜೆ ಮಾಡದ ಶಂಕರ ಪಾಟೀಲಮುನೇನಕೊಪ್ಪರನ್ನ ಇಂದು ಜನ ಬಿಡಲೇ ಇಲ್ಲ. ಜನರ ಪ್ರೀತಿಗೆ ತಲೆಬಾಗಿದ ಶಾಸಕ ಮೊದಲ ಬಾರಿಗೆ ಗುದ್ದಲಿ ಪೂಜೆ ಮಾಡಿದ್ರು.
ಕೆಲವೇ ದಿನಗಳಲ್ಲಿ ಕ್ಷೇತ್ರದಲ್ಲಿ ಸರಕಾರಿ ಶಾಲೆಗಳ ರೂಪವೇ ಬದಲಾಗಲಿದೆ. ಸರಕಾರಿ ಶಾಲೆಗಳೇಂದರೇ ಮೂಗು ಮುರಿಯುವವರಿಗೂ ಶಂಕರ ಪಾಟೀಲಮುನೇನಕೊಪ್ಪರ ಕಾರ್ಯ ಶ್ಲಾಘನೀಯವೆನ್ನುವಂತಾಗಿದೆ.