ಶಾಸಕ ಮುನೇನಕೊಪ್ಪ ಸರಕಾರಿ ಶಾಲೆಗೆ ಹೋದಾಗ ನಡೆದ್ದೇನು: ಅಶೋಕ ಸಜ್ಜನ ಏನಂತಾರೆ..?
1 min readಹುಬ್ಬಳ್ಳಿ: ನವಲಗುಂದ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ನಗರ ಮೂಲಭೂತ ಸೌಕರ್ಯ ನಿಗಮದ ಅಧ್ಯಕ್ಷ ಶಂಕರ ಪಾಟೀಲ ಮುನೇನಕೊಪ್ಪ, ಸ್ವತಃ ಸರಕಾರಿ ಶಾಲೆಗೆ ಬಂದು ಸಮಸ್ಯೆಯನ್ನ ಆಲಿಸಿದ್ದು, ಶಿಕ್ಷಕ ವಲಯದಲ್ಲಿ ಹರ್ಷ ಮೂಡಿಸಿದೆ.
ಹೆಬಸೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಹಾಗೂ ಗಂಡು ಮಕ್ಕಳ ಶಾಲೆಗೆ ಆಗಮಿಸಿ ಶಾಲೆಗಳ ಮೂಲಭೂತ ಸೌಕರ್ಯದ ಜೊತೆಗೆ ಕುಂದು ಕೊರತೆಗಳನ್ನು ತಾಲೂಕು ಪಂಚಾಯತಿ, ಗ್ರಾಮ ಪಂಚಾಯತಿ, ಎಸ್.ಡಿ.ಎಂ.ಸಿ ಪದಾಧಿಕಾರಿಗಳು, ಮುಖ್ಯೋಪಾಧ್ಯಾಯರ, ಸಹ ಶಿಕ್ಷಕರ ಹಾಗೂ ಪಾಲಕರ ಸಮ್ಮುಖದಲ್ಲಿ ಶಾಲಾಭಿವೃದ್ಧಿ ಕುರಿತು ಚರ್ಚಿಸಿ ಮನವಿ ಸ್ವೀಕರಿಸಿದರು.
ಶಾಲೆಯ ಸೌಲಭ್ಯದ ಕುರಿತು ಸ್ಥಳದಲ್ಲಿಯೇ ಸಂಬಂಧಿಸಿದ ಅಧಿಕಾರಿಗಳಿಗೆ ಕಾರ್ಯಾನುಷ್ಠಾನಕ್ಕೆ ಸೂಚಿಸಿದರು. ಈ ದಿಸೆಯಲ್ಲಿ ಗ್ರಾಮೀಣ ಸರ್ಕಾರಿ ಶಾಲೆಗಳಿಗೆ ಖುದ್ದಾಗಿ ಆಗಮಿಸಿ ಅಹವಾಲು ಸ್ವೀಕರಿಸಿದ ಶಾಸಕರಿಗೆ ಕ.ಸ.ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ.ಎಮ್.ಸಜ್ಜನ ಅಭಿನಂದಿಸಿದರು. ಸಂಭಾಜಿ ಕಲಾಲ, ಮುತ್ತು ಚಾಕಲಬ್ಬಿ. ಶಿವಾನಂದ ಲದ್ದಿ, ಸುರೇಶ ಹೂಗಾರ. ಹನುಮರಡ್ಡಿ ಬಲ್ಲರವಾಡ, ಉಳ್ಳಾಗಡ್ಡಿ ಹೊಸಮನಿ, ಎಸ್.ಎಲ್.ಬೆಟಗೇರಿ, ಪಿ.ಬಿ.ಗಿರಡ್ಡಿ, ರವಿ ತೆಗ್ಗಿನಕೇರಿ, ಡಿ.ಎಂ.ಪತ್ತಾರ ಮುಂತಾದವರು ಉಪಸ್ಥಿತರಿದ್ದರು.