ಶಾಸಕ ರಾಜಾ ವೆಂಕಟಪ್ಪ ನಾಯಕ ಪ್ರಾಣಾಪಾಯದಿಂದ ಪಾರು: ಸೇತುವೆ ಕುಸಿತ
1 min readರಾಯಚೂರು: ಕುಸಿದು ಬಿದ್ದ ಸೇತುವೆಯನ್ನ ಶಾಸಕರು ನೋಡಲು ಬಂದಾಗಲೇ ಸೇತುವೆ ಮತ್ತಷ್ಟು ಕುಸಿದು ಸ್ವಲ್ಪದರಲ್ಲೇ ಶಾಸಕರು ಬಚಾವಾದ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಮಲ್ಲಟ ಗ್ರಾಮ ಪಂಚಾಯತಿ ವ್ಯಾಪ್ತಿಯ ನುಗಡೋಣಿ – ಹೊಸೂರು ಸಿದ್ದಗರ್ಚಿ ಯ ಸೇತುವೆ ಬಳಿ ಸಂಭವಿಸಿದೆ.
ಏನೂ ನಡೀತು ಇಲ್ಲಿದೆ ನೋಡಿ ಎಕ್ಸಕ್ಲೂಸಿವ್ ವೀಡಿಯೋ
ಎರಡು ದಿನಗಳ ಹಿಂದೆ ಭಾರಿ ಮಳೆಗೆ ಸೇತುವೆ ಕುಸಿದು ಬಿದ್ದಿತ್ತು. ಈ ಸೇತುವೆ ವೀಕ್ಷಣೆಗೆ ಮಾನ್ವಿ ವಿಧಾನ ಸಭಾ ಕ್ಷೇತ್ರದ ಶಾಸಕ ರಾಜಾ ವೆಂಕಟಪ್ಪ ನಾಯಕ ಆಗಮಿಸಿದ್ದರು. ಈ ಸಂದರ್ಭದಲ್ಲಿ ಶಾಸಕರ ಹಿಂದೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಮಳೆಗೆ ಹಾಳಾಗಿದ್ದ ಸೇತುವೆ ಮೇಲೆ ಶಾಸಕರು ಹಾಗೂ ಅವರ ಹಿಂಬಾಲಕರು ನಿಂತ ಸಮಯದಲ್ಲಿ ಮತ್ತೆ ಕುಸಿದು ಬಿದ್ದಿದೆ.
ಶಾಸಕರ ಪಕ್ಕದಲ್ಲಿ ಇದ್ದವರು ಸೇತುವೆಯ ಕಮರಿನಲ್ಲಿ ಬಿದ್ದು, ಗಾಯಗಳಾಗಿದ್ದು, ಶಾಸಕ ವೆಂಕಟಪ್ಪ ನಾಯಕ ಸ್ವಲ್ಪದರಲ್ಲೇ ಬಚಾವ ಆಗಿದ್ದಾರೆ.
ಹೆಚ್ಚಿನ ಭಾರದಿಂದ ಹಾಳಾದ ಸೇತುವೆ ಮತ್ತಷ್ಟು ಕುಸಿದು ಬಿದ್ದಿದೆ. ಅವಘಡ ದಲ್ಲಿ ನಾಲ್ಕು ಜನರಿಗೆ ಗಾಯಗಳಾಗಿವೆ. ತಕ್ಷಣ ಶಾಸಕರು ತಮ್ಮ ಕಾರಿನಲ್ಲಿಯೇ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.