ಶಾಸಕ ಮುನೇನಕೊಪ್ಪ ಹುಟ್ಟಿದೂರಲ್ಲೇ ಮತಪಟ್ಟಿ ತೊಂದರೆ: ಮತದಾನದಿಂದ ದೂರವುಳಿದ ಗ್ರಾಮಸ್ಥರು
1 min readಧಾರವಾಡ: ಮತದಾರರ ಪಟ್ಟಿಯಲ್ಲಿಯೇ ದೋಷ ಬಂದ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಮರಗೋಳ ಗ್ರಾಮಸ್ಥರು ಮತದಾನದಿಂದ ದೂರವುಳಿದಿದ್ದು, ಮರು ಮತದಾನ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ನವಲಗುಂದ ಕ್ಷೇತ್ರದ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಅವರ ಸ್ವಂತ ಊರಿನಲ್ಲಿ ಮತಪಟ್ಟಿಯಲ್ಲಿಯೇ ಆವಾಂತರ ಸೃಷ್ಠಿಯಾಗಿದೆ. ಇದರಿಂದ ಪ್ರಚಾರ ಮಾಡಿದ ಪ್ರದೇಶದಲ್ಲಿ ಅಭ್ಯರ್ಥಿಗಳ ಮತದಾನವೇ ಇಲ್ಲವಾಗಿದೆ. ಅಷ್ಟೇ ಅಲ್ಲ, ನಾಲ್ಕರಿಂದ ಐದುನೂರು ಮತಗಳು ಕ್ಷೇತ್ರದಲ್ಲಿ ವಿಂಗಡಣೆಯಾಗಿದ್ದು, ಮತದಾರರಲ್ಲೂ ಗೊಂದಲ ಸೃಷ್ಟಿ ಮಾಡಿದೆ.
ಎರಡು ವಾರ್ಡಗಳಲ್ಲಿಯೂ ಮತಪಟ್ಟಿ ಬೇರೆ ಬೇರೆಯಾಗಿದೆ. ಒಂದು ವಾರ್ಡನಲ್ಲಿ ನಾಮಿನೇಷನ್ ಮಾಡಿದ ಅಭ್ಯರ್ಥಿಗಳಿಗೆ ರಾತ್ರಿ ತಾವೂ ವಾರ್ಡಿಗೆ ಸಂಬಂಧವೇ ಇಲ್ಲ ಎನ್ನುವಂತಾಗಿದೆ. ಇದರಿಂದ ಚುನಾವಣೆ ಎದುರಿಸುತ್ತಿರುವ ಅಭ್ಯರ್ಥಿಗಳು ಹಾಗೂ ಮತದಾರರು ಗೊಂದಲಕ್ಕೆ ಬಿದ್ದಿದ್ದರು.
ಈ ಎಲ್ಲ ಸಮಸ್ಯೆಯನ್ನ ಬಗೆಹರಿಸಿ ಮತದಾನಕ್ಕೆ ಅವಕಾಶ ನೀಡಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿರುವ ಗ್ರಾಮಸ್ಥರು, ಮತದಾನದ ದಿನಾಂಕವನ್ನ ಮತ್ತೋಮ್ಮೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ ಇಂದು ಅಮರಗೋಳ ಗ್ರಾಮದಲ್ಲಿ ಮತದಾನ ನಡೆಯುತ್ತಿಲ್ಲ.