Posts Slider

Karnataka Voice

Latest Kannada News

ನವಲಗುಂದ ಕ್ಷೇತ್ರದಲ್ಲಿ ಕೊರೋನಾ ನಿಯಂತ್ರಣ: ಶಾಸಕ ಶಂಕರ ಪಾಟೀಲಮುನೇನಕೊಪ್ಪ…!

1 min read
Spread the love

ನವಲಗುಂದ: ಕೊರೋನಾ ಸಾಂಕ್ರಾಮಿಕ ಸೋಂಕನ್ನ ನಿರಂತರ ಪ್ರಯತ್ನದಿಂದ ನಿಯಂತ್ರಣಕ್ಕೆ ತರಲಾಗಿದ್ದು, ಇದಕ್ಕೆ ಇಡೀ ತಾಲೂಕಾಡಳಿತ ಮತ್ತು ಜನರ ಸಹಕಾರವೇ ಕಾರಣ ಎಂದು ಶಾಸಕ ಶಂಕರ ಪಾಟೀಲಮುನೇನಕೊಪ್ಪ ಹೇಳಿದರು.

ನವಲಗುಂದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಶಾಸಕರು, ನವಲಗುಂದ ಕ್ಷೇತ್ರದ 37 ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿದ್ದೇವೆ. ಪ್ರತಿ ಗ್ರಾಮದಲ್ಲಿ ಜಾಗೃತೆ ಹೆಚ್ಚಾಗುತ್ತಿದೆ. ಕ್ಷೇತ್ರದ ಜನರಿಗೆ ತೊಂದರೆಯಾಗದ ಪ್ರತಿ ವ್ಯವಸ್ಥೆ ಮಾಡಿದ್ದೇವೆ ಎಂದರು.

ಕ್ಷೇತ್ರಕ್ಕೆ ಬಹುತೇಕರು ಸಹಾಯ ಮಾಡಿದ್ದಾರೆ. ಪ್ರತಿಯೊಂದು ದಾನಿಗಳಿಗೂ ಧನ್ಯವಾದ ತಿಳಿಸುತ್ತೇನೆ. ಉತ್ತರ ಕರ್ನಾಟಕದಲ್ಲಿ ಮೊದಲ ತಾಲೂಕಿದು. ಇಲ್ಲಿಯೇ ಆಕ್ಸಿಜನ್ ಪ್ಲಾಂಟ್ ರೆಡಿಯಾಗ್ತಿದೆ ಎಂದು ಹೇಳಿದರು.

ನವಲಗುಂದ ಕ್ಷೇತ್ರದಲ್ಲಿ ಪ್ರತಿಯೊಬ್ಬರು ಸಹಾಯ ಮಾಡಿದ್ದಾರೆ. ವೈದ್ಯರು, ನರ್ಸ್, ಆಶಾ ಕಾರ್ಯಕರ್ತರು ಉತ್ತಮ ಕೆಲಸ ಮಾಡಿದ್ದಾರೆ. ಅವರ ಋಣ ತೀರಿಸಲಾರದಷ್ಟು ಕೆಲಸ ಮಾಡಿದ್ದಾರೆ ಎಂದು ಹೇಳಿದರು.


Spread the love

Leave a Reply

Your email address will not be published. Required fields are marked *

You may have missed