ಮುನೇನಕೊಪ್ಪರಿಗೆ ಸತ್ಕರಿಸಿದ ಕೆಎಂಎಫ್ ನಿರ್ದೇಶಕ ಶಂಕರ ಮುಗದ
ಹುಬ್ಬಳ್ಳಿ: ನೂತನವಾಗಿ ಕರ್ನಾಟಕ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾದ ನವಲಗುಂದ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಅವರನ್ನ ಕೆಎಂಎಫ್ ನಿರ್ದೇಶಕ ಶಂಕರ ಮುಗದ ಸತ್ಕರಿಸಿದರು.
ನಗರದಲ್ಲಿರುವ ಮುನೇನಕೊಪ್ಪ ಅವರ ಮನೆಯಲ್ಲಿ ಭೇಟಿ ಮಾಡಿದ ಶಂಕರ ಮುಗದ, ಶಾಲು ಹಾಕಿ ಮಾಲಾರ್ಪಣೆ ಮಾಡುವ ಮೂಲಕ ಶುಭಾಶಯ ತಿಳಿಸಿ, ಸಿಹಿ ತಿನಿಸಿದರು.
ಇದೇ ಸಮಯದಲ್ಲಿ ಶಂಕರ ಪಾಟೀಲಮುನೇನಕೊಪ್ಪ ಕೂಡಾ, ಶಂಕರ ಮುಗದರಿಗೆ ಸಿಹಿ ತಿನಿಸಿದರು.