ಶಾಸಕ ‘ಧಣಿ’ ಊರಲ್ಲೂ ಚುನಾವಣೆ: ಮೊದಲ ಬಾರಿಗೆ ಗ್ರಾಪಂಗೆ ಮತ ಹಾಕಿದ ‘ಅಮೃತ’

ಧಾರವಾಡ: ಜಿಲ್ಲೆಯಲ್ಲಿ ಹೊಸದೊಂದು ಇತಿಹಾಸ ನಿರ್ಮಾಣವಾಗಿದೆ. ಧಾರವಾಡ ತಾಲೂಕಿನ ಹಂಗರಕಿ ಗ್ರಾಮದಲ್ಲಿ ಧಣಿಗಳ ವಿರುದ್ಧವೂ ಮೊದಲ ಬಾರಿಗೆ ಜನ, ಚುನಾವಣೆ ಮಾಡಿದ್ದಾರೆ. ಯಾವತ್ತೂ ಗ್ರಾಮ ಪಂಚಾಯತಿಗೆ ಮತ ಹಾಕದ ಧಣಿ, ಇಂದು ಮೊದಲ ಬಾರಿಗೆ ಮತದಾನ ಮಾಡಿದ್ದಾರೆ.
ಗ್ರಾಮ ಪಂಚಾಯತಿಯಾದ ನಂತರ ಶಾಸಕ ಅಮೃತ ದೇಸಾಯಿ ಯಾವತ್ತೂ ತಮ್ಮೂರು ಹಂಗರಕಿಯಲ್ಲಿ, ಚುನಾವಣೆ ಮಾಡಿರಲೇ ಇಲ್ಲ. ಹಾಲಿ ಶಾಸಕರ ತಂದೆಯವರಾದ ಎ.ಬಿ.ದೇಸಾಯಿಯವರು ಮುಂದೆ ನಿಂತು ಸರಿಮಾಡಿಕೊಂಡು ಬರುತ್ತಿದ್ದರು. ಇದೇ ಕಾರಣಕ್ಕೆ ಹಂಗರಕಿಯ ನಾಲ್ಕು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೀತಾಯಿತ್ತು.
ಆದರೀಗ, ರಾಜಕೀಯ ಮೇಲಾಟ ಶುರುವಾಗಿದೆ. ಹಾಗಾಗಿಯೇ, ಇಂದು ಚುನಾವಣೆ ನಡೆಯಿತು.
ಶಾಸಕ ಅಮೃತ ದೇಸಾಯಿ ದಂಪತಿ ಸಮೇತ ಹಂಗರಕಿಯ ಶಾಲೆಯಲ್ಲಿನ ಮತ ಕೇಂದ್ರಕ್ಕೆ ಹೋಗಿ ಮತದಾನ ಮಾಡಿದರು.
ಹಂಗರಕಿಯಲ್ಲಿ ಮೊದಲ ಬಾರಿಗೆ ಗ್ರಾಮ ಪಂಚಾಯತಿಗೆ ಮತದಾನ ನಡೆದದ್ದು, ಗ್ರಾಮಸ್ಥರು ನಿರಸವಾಗಿ ಪ್ರತಿಕ್ರಿಯೆ ಕಂಡು ಬಂದಿದೆ. ಆದರೂ, ಹಂಗರಕಿ ಧಣಿಗಳ ಊರಲ್ಲೂ ಚುನಾವಣೆ ನಡೆದದ್ದು ರಾಜಕಾರಣಿಗಳಲ್ಲಿ ಹುಬ್ಬೇರಿಸುವಂತೆ ಮಾಡಿದೆ.