ಇಂದು ಮೂರು ಕೋಟಿ ಕಾಮಗಾರಿಗೆ ಚಾಲನೆ-ನಾಳೆ 4.4 ಕೋಟಿಗೆ ಪೂಜೆ- ಹಿರಿಯರು-ಮಹಿಳೆಯರಿಂದಲೇ ಕಾಮಗಾರಿಗೆ ಚಾಲನೆ
ಧಾರವಾಡ: ಕೊರೋನಾ ಸಮಯದಲ್ಲೂ ನಿರಂತರವಾಗಿ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ಕೊಡಲು ಮುಂದಾಗಿರುವ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ, ಇಂದು ಮೂರು ಕೋಟಿ ರೂಪಾಯಿಯ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ನಾಳೆಯೂ ಕೂಡಾ 4.4 ಕೋಟಿ ರೂಪಾಯಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ.
ಇಂದು ಧಾರವಾಡ ಕ್ಷೇತ್ರದ ಮೂರನೇಯ ವಾರ್ಡಿನಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ, ಶಾಸಕರು ಕ್ಷೇತ್ರದ ಜನರನ್ನೇ ಮುಂದು ಮಾಡಿ, ಪೂಜೆ ಮಾಡಿಸಿದರು.
ಸಾರ್ವಜನಿಕರ ಅಭಿಪ್ರಾಯವನ್ನ ಪರಿಗಣನೆಗೆ ತೆಗೆದುಕೊಂಡು ಕಾಮಗಾರಿಗಳನ್ನ ಆರಂಭಿಸಿರುವ ಶಾಸಕ ಅಮೃತ ದೇಸಾಯಿ, ನಾಳೆಯೂ ಕೂಡಾ ಧಾರವಾಡದ 7,8 ಮತ್ತು 9ವಾರ್ಡಿನಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
ಶಾಸಕ ಅಮೃತ ದೇಸಾಯಿ ಇಂದು ನಡೆದ ಬಹುತೇಕ ಕಾಮಗಾರಿಗಳಿಗೆ ಸ್ಥಳೀಯ ಹಿರಿಯರು, ಮಹಿಳೆಯರು ಚಾಲನೆ ನೀಡುವಂತೆ ಮಾಡಿದ್ದು, ಎಲ್ಲರ ಮನಸ್ಸನ್ನ ಗೆದ್ದಿತು. ಹೋದ ಕಡೆಯಲ್ಲಾ ನೂರಾರೂ ಜನರು ಸೇರಿ, ಶಾಸಕರ ಕಾರ್ಯವನ್ನ ಪ್ರಶಂಸಿದರು.