“ಕೊಲೆಗೆಡುಕ ಶಾಸಕ” ರಾತ್ರೋರಾತ್ರಿ ನಡೆಯುತ್ತಿದೆ ಬಿಜೆಪಿ-ಜೆಡಿಎಸ್ ಹೈಡ್ರಾಮಾ..!
ತುಮಕೂರು: ದೌರ್ಜನ್ಯದ ಮೂಲಕ ತೆಂಗಿನ ಸಸಿಗಳನ್ನ ಕೀಳಿಸಿ, ಹೆಣ್ಣು ಮಕ್ಕಳ ಮೇಲೆ ಲಾಠಿಚಾರ್ಚ್ ಮಾಡಿಸಿದಂತಹ ಕೊಲೆಗೆಡುಕ ಶಾಸಕ ಮಸಾಲೆ ಜಯರಾಂರವರ ವಿರುದ್ಧ ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಎಂಬ ಬ್ಯಾನರ್ ಜಿಲ್ಲೆಯಲ್ಲಿ ಹೈಡ್ರಾಮಾ ಕ್ರಿಯೇಟ್ ಮಾಡಿದೆ.
ಇದೇ ತಿಂಗಳ 30ನೇ ತಾರೀಖಿಗೆ ಮಾಜಿ ಶಾಸಕ ಎಂ .ಟಿ.ಕೃಷ್ಣಪ್ಪನವರ ನೇತೃತ್ವದಲ್ಲಿ ಹೋರಾಟ ಮಾಡಲಾಗುವುದೆಂದು ಜೆಡಿಎಸ್ ಕಾರ್ಯಕರ್ತರು ಬ್ಯಾನರ್ ಹಾಕಿದ್ದೇ ಬಿಜೆಪಿ-ಜೆಡಿಎಸ್ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿ ಮಾಡಿದ್ದು, ಈಗಲೂ ಗೊಂದಲ ಆರಂಭವಾಗಿದೆ.
ತುಮಕೂರು ಜಿಲ್ಲೆಯ ತುರುವೇಕೆರೆ ಪಟ್ಟಣದಲ್ಲಿ ಮಾಜಿ ಹಾಗೂ ಹಾಲಿ ಶಾಸಕರ ಹೈಡ್ರಾಮ ಆರಂಭವಾಗಿದೆ. ಕೊಲೆಗಡುಕ ಶಾಸಕ ಮಸಾಲೆ ಜಯರಾಮ್ ಅಂತಾ ಬ್ಯಾನರ್ ಅಳವಡಿಸಿರುವ ಜೆಡಿಎಸ್ ಕಾರ್ಯಕರ್ತರು. ಕಳೆದ ವಾರ ತುರುವೇಕೆರೆ ತಾಲೂಕಿನ ಗುಡ್ಡೇನಹಳ್ಳಿ ಗ್ರಾಮದ ಜಮೀನಿನಲ್ಲಿ ಸುಮಾರು 800 ತೆಂಗಿನ ಮರಗಳನ್ನ ತಾಲೂಕು ಆಡಳಿತ ತೆರವುಗೊಳಿಸಿತ್ತು. ತೆಂಗಿನ ಮರ ತೆರವಿಗೆ ಶಾಸಕ ಮಸಾಲೆ ಜಯರಾಮ್ ಬೆಂಬಲ ಎಂಬ ಆರೋಪ ಮಾಡಲಾಗಿದೆ.
ಇದೇ ತಿಂಗಳು 30-31 ರಂದು ಹಾಲಿ ಶಾಸಕರ ವಿರುದ್ಧ ಬೃಹತ್ ಪ್ರತಿಭಟನಾ ಪಾದಯಾತ್ರೆಯನ್ನ ಮಾಜಿ ಶಾಸಕ ಎಮ್ ಟಿ ಕೃಷ್ಣಪ್ಪ ಹಮ್ಮಿಕೊಂಡಿದ್ದಾರೆ. ಪಾದಯಾತ್ರೆ ಬಗ್ಗೆ ಬ್ಯಾನರ್ ಅಳವಡಿಕೆ, ಬ್ಯಾನರ್ ನಲ್ಲಿ ಕೊಲೆಗಡುಕ ಶಾಸಕ ಅಂತಾ ಪದ ಬಳಕೆ ಮಾಡಲಾಗಿದೆ. ಕೊಲೆಗಡುಕ ಪದ ಬಳಕೆಗೆ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ ನಡೆಯುತ್ತಿದ್ದು, ಅಸಂಬದ್ದ ಪದ ಬಳಕೆ ಮಾಡಿದ ಹಿನ್ನೆಲೆ ಪಟ್ಟಣ ಪಂಚಾಯತಿಯಿಂದ ಬ್ಯಾನರ್ ತೆರವು ಮಾಡಿದ್ದರಿಂದ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ ಆರಂಭಿಸಿದ್ದರಿಂದ ಗೊಂದಲ ಉಂಟಾಗಿದೆ.