Posts Slider

Karnataka Voice

Latest Kannada News

ಅಯ್ಯೋ… ದುರ್ವಿಧಿ: ಅಪಘಾತದಲ್ಲಿ ಶಾಸಕ ಸಾವು

1 min read
Spread the love

ಅಮೆರಿಕ: ಸೌತ್ ಕರೋಲಿನಾದಿಂದ ಅಲಾಸ್ಕ ಕಡೆ ಹೊರಟ ಸಮಯದಲ್ಲಿ ಎರಡು ವಿಮಾನಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಶಾಸಕ ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ.
ಅಲಾಸ್ಕದ ಕೆನೈ ಪೆನಿನ್ಸುಲಾದ ಸೋಲ್ಡೊಟ್ನಾ ನಗರದ ವಿಮಾನ ನಿಲ್ದಾಣದ ಹತ್ತಿರ ಶಾಸಕ ಗ್ಯಾರಿ ನೂಪ್ ಇದ್ದ ವಿಮಾನ ಹಾಗೂ ಸೌಥ್ ಕರೋಲಿನಾದಿಂದ ಅಲಾಸ್ಕ ಕಡೆಗೆ ಬರುತ್ತಿದ್ದ ವಿಮಾನಗಳ ನಡುವೆ ದುರ್ಘಟನೆ ಸಂಭವಿಸಿದೆ.
ಮೃತರನ್ನು ಪೈಲಟ್ ಗ್ರೆಗೋರಿ ಬೆಲ್, ಗೈಡ್ ಡೇವಿಡ್ ರೋಜರ್ಸ್ ಮತ್ತು ಸೌಥ್ ಕರೊಲಿನಾ ಪ್ರವಾಸಿಗರಾದ ಕಲೆಬ್ ಹಸ್ಲಿ, ಹೆದರ್ ಹಸ್ಲಿ , ಮೆಕಾಯ್ ಹಸ್ಲಿ ಮತ್ತು ಕ್ರಿಸ್ಟಿ ರೈಟ್ ಎಂದು ಗುರುತಿಸಲಾಗಿದೆ. ಶಾಸಕ ಗ್ಯಾರಿ ನೂಪ್ ರಿಪಬ್ಲಿಕನ್ ಮತ್ತು ರಾಜ್ಯ ಸದನದ ಉಭಯಪಕ್ಷೀಯ ಬಹುಮತದ ಸದಸ್ಯನಾಗಿದರು. ಪ್ರಕರಣ ಕುರಿತು ತನಿಖೆಗೆ ಆದೇಶಿಸಲಾಗಿದೆ. ಪತನವಾಗಿರುವ ವಿಮಾನಗಳ ಅವಶೇಷಗಳು ಹೆದ್ದಾರಿ ಮೇಲೆಯೇ ಬಿದ್ದಿವೆ.
ಅಲಾಸ್ಕದಲ್ಲಿ ಕೊನೆಯಾದಾಗಿ 2019ರ ಮೇ ನಲ್ಲಿ ಕೆಟ್ಚಿಕನ್ ಸಮೀಪ ವಿಮಾನಗಳ ಡಿಕ್ಕಿಯಾಗಿತ್ತು. ಈ ಘಟನೆಯಲ್ಲಿ 6 ಜನ ಮೃತರಾಗಿದ್ದರೆ, 10 ಜನರನ್ನು ರಕ್ಷಿಸಲಾಗಿತ್ತು.


Spread the love

Leave a Reply

Your email address will not be published. Required fields are marked *