ಪಿಎಸ್ಐ ಹಗರಣ: ಮಾತಾಡಿದ್ದನ್ನ ಒಪ್ಪಿಕೊಂಡ ಬಿಜೆಪಿ ಶಾಸಕ ದಡೇಸೂಗುರ….!! KarnatakaVoice.com Exclusive

ಕೊಪ್ಪಳ: ಪಿಎಸ್ಐ ನೌಕರಿ ಕೊಡಿಸುವುದಾಗಿ ಹದಿನೈದು ಲಕ್ಷದ ವಿಷಯವಾಗಿ ಮಾತನಾಡಿರುವ ಕನಕಗಿರಿ ಬಿಜೆಪಿ ಶಾಸಕ, ನಾ ಮಾತಡಿದ್ದನ್ನ ರೆಕಾರ್ಡ್ ಮಾಡಿ ಹಾಕಿದ್ದಾರೆಂದು ಸ್ವತ ಹೇಳಿಕೆ ನೀಡಿದ್ದಾರೆ.
ಶಾಸಕ ಬಸವರಾಜ ದಡೇಸೂಗುರ ಹೇಳಿದ್ದಿಲ್ಲಿದೆ…
ಗಂಗಾವತಿ ಮೂಲದ ವ್ಯಕ್ತಿಯೋರ್ವನಿಗೆ ಪಿಎಸ್ಐ ನೌಕರಿ ಕೊಡಿಸುವುದಾಗಿ 15. ಲಕ್ಷ ರೂಪಾಯಿ ಪಡೆದುಕೊಂಡು, ಅದನ್ನ ಮರಳಿ ಕೊಡದೇ ಸತಾಯಿಸುತ್ತಿದ್ದಾರೆಂದು ಹೇಳಲಾಗಿರುವ ಆಡಿಯೋಂದು ವೈರಲ್ ಆಗಿತ್ತು.
ಆ ಆಡೀಯೋದಲ್ಲಿ ಏನಿದೆ…
ರಾಜ್ಯದಲ್ಲಿ ಪಿಎಸ್ಐ ನೇಮಕಾತಿ ಹಗರಣ ಹಲವು ಸ್ವರೂಪವನ್ನ ಪಡೆಯುತ್ತಲೇ ಇದೆ. ಈಗ ಆಡಳಿತಾರೂಢ ಬಿಜೆಪಿಯ ಶಾಸಕರೇ ಆಡೀಯೋ ತಮ್ಮದು ಎಂದು ಹೇಳಿದ್ದಾರೆ. ಇವರನ್ನ ರಾಜ್ಯ ಸರಕಾರ ಬಂಧನ ಮಾಡತ್ತೆ ಎಂಬುದನ್ನ ಕಾದು ನೋಡಬೇಕಿದೆ.