ಮೊಣಕಾಲಲ್ಲಿ ಮೆಟ್ಟಿಲೇರಿ ಪೂಜೆ: ಮುನೇನಕೊಪ್ಪ ಆರೋಗ್ಯವಾಗಿರುವಂತೆ ನೋಡಿಕೋ ದೇವರೇ..!

ಹುಬ್ಬಳ್ಳಿ: ನವಲಗುಂದ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅವರು ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು ಮೊಣಕಾಲಿನಲ್ಲಿ ಮೆಟ್ಟಿಲೇರಿ ವಿಶೇಷ ಪೂಜೆ ಸಲ್ಲಿಸಿದ ಪ್ರಸಂಗ ಶ್ರೀ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ನಡೆಯಿತು.
ಕೊರೋನಾ ಸಂದರ್ಭದಲ್ಲಿ ಸತತವಾಗಿ 6 ತಿಂಗಳುಗಳ ಕಾಲ ತಮ್ಮ ಕ್ಷೇತ್ರದಲ್ಲಿ ಹಗಲಿರುಳು ಸಾರ್ವಜನಿಕರ ಪರವಾಗಿ ಓಡಾಡಿ ಕೆಲ್ಸ ಮಾಡಿದ ನವಲಗುಂದ ಶಾಸಕ ಮುನೆನಕೊಪ್ಪ ಅವರಿಗೆ ಕೊರೋನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ…
ಶಾಸಕ ಶಂಕರ ಪಾಟೀಲಮುನೇನಕೊಪ್ಪ ಅಭಿಮಾನಿಗಳು, ಹುಬ್ಬಳ್ಳಿಯಲ್ಲಿರುವ ಶ್ರೀ ಶಿರಡಿ ಸಾಯಿ ಬಾಬಾ ಮಂದಿರಕ್ಕೆ ತೆರಳಿ ವಿಶೇಷವಾದ ಪೂಜೆ ಮಾಡಿದರು. ಕೆಲವರು ಮಂಡಿ ಊರಿ ಸಾಯಿಬಾಬಾ ಮೆಟ್ಟಿಲುಗಳನ್ನು ಹತ್ತುವುದರ ಜೊತೆಗೆ ವಿಶೇಷ ಸೇವೆ ಸಲ್ಲಿಸಿ ತಮ್ಮ ನೆಚ್ಚಿನ ನಾಯಕ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಶಂಕರ ಪಾಟೀಲಮುನೇನಕೊಪ್ಪರ ಅಭಿಮಾನಿಗಳಾದ ಮಂಜುನಾಥ ಹೆಬಸೂರ, ವಿಜಯಕಾಂತ ನಿಡವಣಿ, ಸಂತೋಷ ಹಿರೇಮಠ, ಅಣ್ಣಪ್ಪ, ದ್ಯಾಮಣಗೌಡ, ಶಂಕರಗೌಡ ಪಾಟೀಲ, ಕಿರಣ ಸೇರಿದಂತೆ ಹಲವರು ಭಾಗವಹಿಸಿದ್ದರು.