ಒಡಹುಟ್ಟಿದವನ ನಿರ್ಗಮನ: ನಿಗಮದ ಅಧಿಕಾರ ಸ್ವೀಕಾರ ಮುಂದೂಡಿದ ಶಾಸಕ
ಧಾರವಾಡ: ತನ್ನ ಒಡಹುಟ್ಟಿದ ಸಹೋದರನಿಗಾಗಿ ಇಂದು ಕರ್ನಾಟಕ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸ್ವೀಕರಿಸಬೇಕಿದ್ದ ಅಧಿಕಾರವನ್ನ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಮುಂದೂಡಿದ್ದಾರೆ.
ಕಳೆದ ಶನಿವಾರವಷ್ಟೇ ಸರಕಾರದಿಂದ ನೇಮಕವಾಗಿದ್ದ ನವಲಗುಂದ ಕ್ಷೇತ್ರದ ಶಾಸಕ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ಮೇರೆಗೆ ಬೆಳಿಗ್ಗೆ ಅಧಿಕಾರ ಸ್ವೀಕಾರ ಮಾಡಬೇಕಿತ್ತು.
ಆದರೆ, ವಿಧಿಯಾಟ ಬೇರೆಯದ್ದೇ ಆಗಿತ್ತು. ಬೆಂಗಳೂರಿಗೆ ಹೊರಟ ನಿಂತ ಶಾಸಕರಿಗೆ ಸಹೋದರ ಹನಮಂತಗೌಡರ ಅನಾರೋಗ್ಯ ಮುಂದೆ ಹೋಗದಂತೆ ಮಾಡಿತ್ತು. ನಿನ್ನೆಯಿಂದ ಸಹೋದರನಿಗಾಗಿ ಆಸ್ಪತ್ರೆಯಲ್ಲಿ ಕಾದು ಕುಳಿತಿದ್ದ ಶಾಸಕ ಶಂಕರ ಪಾಟೀಲಮುನೇನಕೊಪ್ಪ, ಕೊನೆಗೂ ಕಣ್ಣೀರಾಗುವ ಸ್ಥಿತಿ ಬಂತು.
ಇಂದು ನವಲಗುಂದ ತಾಲೂಕಿನ ಅಮರಗೋಳದಲ್ಲಿ ಸಂಜೆ ನಾಲ್ಕು ಗಂಟೆಗೆ ಅಣ್ಣನ ಅಂತ್ಯಕ್ರಿಯೆ ನಡೆಯುತ್ತಿದೆ.
ಕಳೆದ ವರ್ಷ ಆಗಸ್ಟ್ 27 ರಂದು ತಾಯಿಯನ್ನ ಕಳೆದುಕೊಂಡಿದ್ದ ಶಾಸಕ ಮುನೇನಕೊಪ್ಪ, ಅದೇ ತಿಂಗಳ ಮೊದಲ ವಾರದಲ್ಲಿ ಸಹೋದರನನ್ನ ಕಳೆದುಕೊಂಡು ತೀವ್ರ ನೋವಿಗೀಡಾದ್ದಾರೆ.
ಅಧಿಕಾರದ ಹಿಂದೆ ಓಡುವವರ ನಡುವೆ ಶಂಕರ ಪಾಟೀಲಮುನೇನಕೊಪ್ಪ ವಿಭಿನ್ನವಾಗಿ ನಿಲ್ಲುತ್ತಾರೆ. ಕೆಲವರು ಅಧಿಕಾರದ ಹಪಾಹಪಿಗೆ ಬಿದ್ದು ಮನೆಯಲ್ಲೇ ಮರಣ ಹೊಂದಿದರೂ, ದೂರದಲ್ಲೇ ಉಳಿಯುವವರ ನಡುವೆ ಇವತ್ತಿನ ಘಟನೆ ಬೇರೆಯಾಗಿಯೇ ಕಾಣುತ್ತದೆ.
ನಿಗಮದ ಅಧಿಕಾರವನ್ನ ಸ್ವೀಕರಿಸುವ ದಿನಾಂಕವನ್ನೂ ಶಾಸಕ ಮುನೇನಕೊಪ್ಪ, ಮುಂದೂಡಿದ್ದಾರೆ.