ಶಾಸಕ ಮುನೇನಕೊಪ್ಪ ಸಹೋದರ ವಿಧಿವಶ: ಹೃದಯಾಘಾತದಿಂದ ದೂರವಾದ ಹೃದಯವಂತ
1 min readಧಾರವಾಡ: ನವಲಗುಂದ ಕ್ಷೇತ್ರದ ಶಾಸಕ ಹಾಗೂ ನೂತನವಾಗಿ ಕರ್ನಾಟಕ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಂಕರ ಪಾಟೀಲಮುನೇನಕೊಪ್ಪ ಸಹೋದರ ಹನಮಂತಗೌಡ ಇಂದು ಬೆಳಗಿನ ಜಾವ ತೀವ್ರ ಹೃದಯಾಘಾತದಿಂದ ತೀರಿಕೊಂಡರು.
ನವಲಗುಂದ ತಾಲೂಕಿನ ಅಮರಗೋಳದಲ್ಲಿರುತ್ತಿದ್ದ ಹನಮಂತಗೌಡ, ಗ್ರಾಮದ ಪ್ರತಿಯೊಬ್ಬರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ತಮ್ಮ ಸಹೋದರ ಶಾಸಕರಿದ್ದರು ಯಾವುದೇ ಅಹಂ ಹೊಂದದೇ ಎಲ್ಲರೊಂದಿಗೂ ಬೆರೆಯುತ್ತಿದ್ದರು. ಇಂತಹ ವ್ಯಕ್ತಿ ಇಂದು ಬಾರದ ಲೋಕಕ್ಕೆ ತೆರಳಿದ್ದು, ಬಹುತೇಕರಿಗೆ ದಿಗ್ಘಭ್ರಮೆ ಮೂಡಿಸಿದೆ.
ತೀವ್ರ ಹೃದಯಾಘಾತದಿಂದ ಬಳಲಿದ್ದ ಹನಮಂತಗೌಡರನ್ನ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರೂ ಚಿಕಿತ್ಸೆ ಫಲಿಸದೇ ಮರಣ ಹೊಂದಿದರು.
ಹನಮಂತಗೌಡರ ಅಂತ್ಯಕ್ರಿಯೆ ಅಮರಗೋಳದಲ್ಲಿ ಸಂಜೆ ನಾಲ್ಕು ಗಂಟೆಗೆ ನೆರವೇರಲಿದೆ.