ಶಾಸಕರ ಬರ್ತಡೇ ಕೊರೋನಾ ಅಡ್ಡಿಯಿಲ್ಲ: ಗುಂಪಿನಲ್ಲೇ ಬರ್ತಡೇ ಆಚರಿಸಿಕೊಂಡ ಶಾಸಕ

ತುಮಕೂರು: ತುರುವೆಕೆರೆ ಶಾಸಕ ಮಸಾಲೆ ಜೈರಾಮ್ ತಮ್ಮ ಹುಟ್ಟುಹಬ್ಬವನ್ನ ಭರ್ಜರಿಯಾಗಿಯೇ ಆಚರಿಸಿಕೊಂಡು ಕೊರೋನಾ ಸಮಯದಲ್ಲೂ ಸುದ್ದಿಯಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ನೂರಾರೂ ಜನರ ಗುಂಪು ಕಟ್ಟಿಕೊಂಡು ಹುಟ್ಟುಹಬ್ಬವನ್ನ ಆಚರಿಸಿಕೊಂಡ ಮಸಾಲೆ ಜೈರಾಮ್, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕಾರ್ಯಕರ್ತರೊಂದಿಗೆ ಬೇಕಾಬಿಟ್ಟಿ ಆಚರಿಸಿಕೊಂಡಿದ್ದಾರೆ. ತಾವೇ ನಿಂತು ಜನರಿಗೆ ತಿಳುವಳಿಗೆ ಹೇಳಬೇಕಾದವರೇ ಹೀಗೆ ಮಾಡುತ್ತಿರುವುದು ಅನೇಕರಲ್ಲಿ ಅಸಹ್ಯ ಮೂಡಿಸಿದೆ.