ಮತ್ತೆ ವಿವಾದದಲ್ಲಿ ಶಾಸಕ ಅರವಿಂದ ಬೆಲ್ಲದ: ಅಸಲಿ ಕಹಾನಿ ವೀಡಿಯೋ ಸಮೇತ…!!!
1 min readಧಾರವಾಡ: ಶಾಸಕ ಅರವಿಂದ ಬೆಲ್ಲದ ಅವರ ಹೆಸರು ಮತ್ತೊಂದು ವಿವಾದದಲ್ಲಿ ಕೇಳಿ ಬಂದಿದ್ದು, ಅದರ ಸತ್ಯಾಸತ್ಯಗಳು ವೀಡಿಯೋ ಮೂಲಕ ಬಹಿರಂಗಗೊಂಡಿವೆ.
ಶಂಕುತಲಾ ಮನಸೂರ ಎಂಬ ಮಹಿಳೆ ಆತ್ಮಹತ್ಯೆ ಯತ್ನಕ್ಕೆ ಕಾರಣವಾಗಿದ್ದು, ಶಾಸಕ ಅರವಿಂದ ಬೆಲ್ಲದ ಹಾಗೂ ರವಿ ಬೆಂತೂರ ಎಂದು ಡೆತ್ ನೋಟ್ ಬರೆಯಲಾಗಿತ್ತು. ಆದರೆ, ಅಸಲಿಯತ್ತು ಬೇರೆಯದ್ದೆ ಇದ್ದು ಡೆತ್ನೋಟ್ನ್ನ ಸಂಘಟನೆಯ ಪ್ರಮುಖರೋರ್ವರು ಕೂತು ಬರೆಸಿರುವ ವೀಡಿಯೋ ಕರ್ನಾಟಕವಾಯ್ಸ್.ಕಾಂಗೆ ಲಭಿಸಿದೆ.
ಅಸಲಿ ಕಹಾನಿಯ ವೀಡಿಯೋ… ಪೂರ್ಣವಾಗಿ ನೋಡಿ…
ನೌಕರಿ ಕಳೆದುಕೊಂಡಿರುವ ಶಕುಂತಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದರ ಹಿಂದಿನ ರಹಸ್ಯವೇನು ಎಂಬುದನ್ನ ದಕ್ಷರಿದ್ದರೇ ಪೊಲೀಸರು ಪತ್ತೆ ಹಚ್ಚಬೇಕಿದೆ. ಅಷ್ಟೇ ಅಲ್ಲ, ಶಾಸಕ ಅರವಿಂದ ಬೆಲ್ಲದ ಅವರು ಈ ಪ್ರಕರಣದ ಸತ್ಯಾಸತ್ಯತೆಯ ಬಗ್ಗೆ ತನಿಖೆಗೆ ಆಗ್ರಹಿಸಬೇಕಿದೆ. ಇಲ್ಲದಿದ್ದರೇ ಇದರಲ್ಲಿನ ಯಾರೂ ಪ್ರಾಮಾಣಿಕರಲ್ಲ ಎಂಬುದು ಗೊತ್ತಾಗತ್ತೆ.